
ಯಲ್ಲಾಪುರ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಯುವ ನಾಯಕ ವಿವೇಕ್ ಹೆಬ್ಬಾರ ತಮ್ಮ ವಿಂಪ್ ಸಂಸ್ಥೆಯ ಸಿ.ಎಸ್.ಆರ್ ಕಾರ್ಯ ಚಟುವಟಿಕೆಯ ಅಡಿಯಲ್ಲಿ ಕೊಡುಗೆಯಾಗಿ ನೀಡಿದ್ದ 5 ಲಕ್ಷ ರೂಪಾಯಿ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕವನ್ನುಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಿ ಮಾತನಾಡಿ

ವಿದ್ಯೆ ಯಾರೊಬ್ಬರ ಸ್ವತ್ತು ಅಲ್ಲ ಅದಕ್ಕೆ ಬಡವ, ಶ್ರೀಮಂತ ಎಂಬ ಭೇದ ಭಾವ ಇಲ್ಲಾ. ಇಂದು ವಿದ್ಯೆ ಮತ್ತು ಯೋಗ್ಯತೆ ಎರಡನ್ನೂ ಸಹ ಪರಿಗಣಿಸುವ ಸ್ಪರ್ಧಾತ್ಮಕ ಯುಗ ಆದ ಕಾರಣ ಕೇವಲ ಪಠ್ಯ-ಪುಸ್ತಕದ ಜ್ಞಾನವಲ್ಲದೇ, ಎಲ್ಲ ಮೌಲ್ಯಗಳನ್ನಾಧಾರಿತ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಎಂದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಯುವನಾಯಕವಿವೇಕ್ ಹೆಬ್ಬಾರ್, ಸಚಿವರ ಪತ್ನಿ ವನಜಾಕ್ಷಿ ಹೆಬ್ಬಾರ್, ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್.ಗಾಂವ್ಕರ್, ಪ್ರಧಾನ ಕಾರ್ಯದರ್ಶಿ ಡಾ.ರವಿ ಭಟ್ ಬರಗದ್ದೆ, ಪ್ರಮುಖರಾದ ವಿಜಯ ಮಿರಾಶಿ, ಶಿರಿಷ್ ಪ್ರಭು, ಬಾಲಕೃಷ್ಣ ನಾಯಕ, ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ, ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಹಾಗೂ ಪ.ಪಂ ಅಧ್ಯಕ್ಷೆ ಸುನಂದಾ ದಾಸ್,ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣಕರ್ ,ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಗನ ಬಸಯ್ಯ ಪ್ರಾಂಶುಪಾಲರು, ವಸತಿ ನಿಲಯದ ಶಿಕ್ಷಕರು ಮುಂತಾದವರು ಉಪಸ್ಥಿತರಿದ್ದರು.
,
:
Leave a Comment