ಹೊನ್ನಾವರ : ಪಟ್ಟಣದ ಬಸ್ಸು ತಂಗುದಾಣಕ್ಕೆ ಹೊಂದಿಕೊಂಡಿರುವ ನೀರು ಹೋಗುವ ಕಾಲುವೆ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಹತ್ತು ಲಕ್ಷ ರೂಪಾಯಿ ಕೊಡುವುದಾಗಿ ಶಾಸಕ ದಿನಕರ ಶೆಟ್ಟಿ ಹೇಳಿದರು.
ಅವರು ನೂತನ ಬಸ್ಸು ತಂಗುದಾಣದ ಹತ್ತಿರದ ಕಾಲುವೆ ಯಿಂದ ಮಳೆಯ ನೀರು ರಸ್ತೆಯ ಮೇಲೆ ಬಂದು ವಾಹನ ಮತ್ತು ಸಾರ್ವಜನಿಕ ಸಂಚಾರಕ್ಕೆ ಉಂಟಾಗುತ್ತಿರುವ ಸಮಸ್ಯೆಯನ್ನು ಸರಿಪಡಿಸಲು ಸ್ಥಳಕ್ಕೆ ಭೇಟಿ ನೀಡಿ ಶೀಘ್ರದಲ್ಲಿ ಹೊಸ ಕಾಲುವೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.


ಕಾಲುವೆ ನಿರ್ಮಾಣಕ್ಕೆ ಅಡ್ಡಿ ಉಂಟಾಗಿದ್ದ ವಿದ್ಯುತ್ ಕಂಬವನ್ನು ತೆರವು ಗೊಳಿಸಿ ಸ್ವಲ್ಪ ಮುಂದಕ್ಕೆ ಹೂಳುವಂತೆ ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. ಕಾಲುವೆ ಸರಿಪಡಿಸಲು ಪ. ಪಂ. ದವರು ಎಷ್ಟೇ ಪ್ರಯತ್ನ ಪಟ್ಟರು ಅದು ಸರಿಯಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ. ನೀರು ಬರುವ ಸಾಂದ್ರತೆಕ್ಕಿಂತ ಕಾಲುವೆ ಕಿರಿದಾದ ಕಾರಣ ನೀರಿನ ಒತ್ತಡಕ್ಕೆ ರಸ್ತೆಯ ಮೇಲೆ ಹರಿಯುವಂತಾಗಿತ್ತು. ಕಾಲುವೆ ತೆರವು ಗೊಳಿಸಿರುವುದರಿಂದ ರಸ್ತೆಯ ಪಕ್ಕದಲ್ಲಿ ಮುಚ್ಚಿಗೆ ಮಾಡಿದ ಕಳ್ಳುಗಳನ್ನು ರಸ್ತೆಯ ಮೇಲೆ ಇಟ್ಟಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಶಾಸಕರೇ ಖುದ್ದಾಗಿ ಬಂದು ಸಮಸ್ಯೆ ಪರಿಶೀಲಿಸಿ ಶೀಘ್ರ ಬಗೆಹರಿಸುವ ಭರವಸೆ ನೀಡಿದ್ದಾರೆ.
ಪಟ್ಟಣದ ಕರ್ಕಿನಾಕಾ, ಬಾಂದೆಗದ್ದೆ, ಸರ್ಪಿ ಸೆಂಟರ್, ನವನಗರ ಕಾಲೋನಿಯ ಸ್ಥಳೀಯ ನಿವಾಸಿಗಳು ಸ್ಥಳೀಯ ವ್ಯಕ್ತಿಯೊಬ್ಬರಿಂದ ಈ ಹಿಂದಿನಿಂದಲು ನೈಸರ್ಗಿಕವಾಗಿ ಹರಿದು ಹೋಗುತ್ತಿದ್ದ ನೀರನ್ನು ಮಣ್ಣು ಹಾಕಿ ತಡೆದಿದ್ದಾರೆ, ಅದನ್ನು ತೆರವು ಗೊಳಿಸಬೇಕೆಂದು ಎಂದು ಮನವಿ ಮಾಡಿಕೊಂಡಿದ್ದರು.

ಶಾಸಕರು ಸ್ಥಳಕ್ಕೆ ಭೇಟಿ ಪರಿಶೀಲಿಸಿ, ಮಣ್ಣು ತೆರವುಗೊಳಿಸಿ ಸ್ಥಳೀಯ ವಿವಾಸಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಚಂದಾವರ ಹನುಮಂತ ದೇವರ ಫಲ್ಲಕ್ಕಿ ಮೆರವಣಿಗೆ*
ಆಕಸ್ಮಿಕವಾಗಿ ಶ್ರೀ ಶ್ರೀ ರಾಘವೇಶ್ವರ ಶ್ರೀಗಳ ವಾಹನಕ್ಕೆ ಎದುರಾದ ಶ್ರೀ ಹನುಮಂತ ದೇವರ ಪಲ್ಲಕ್ಕಿ…
Leave a Comment