
ಲಾರಿಯೊಂದರಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 6 ಒಂಟೆಗಳನ್ನು ಯಲ್ಲಾಪುರ ಪೊಲೀಸರು ವಶಪಡಿಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ನಿವಾಸಿಗಳಾದ ಕಾಂತೇಶ ಹನುಮಂತಪ್ಪ ಭಜಂತ್ರಿ(26) ಪ್ರಕಾಶ ಪಕೀರಪ್ಪ ನಾಯಕ (22) ಈರಪ್ಪ ಮೇಗಪ್ಪ ನಾಯಕ ಬಂಧಿಸಿ ಆರೋಪಿಗಳಾಗಿದ್ದು ಇವರು ಯಲ್ಲಾಪುರ ಜೋಡುಕೆರೆ ಚೆಕ್ ಪೋಸ್ಟ್ ಬಳಿ ಅತಿ ವೇಗದಲ್ಲಿ ಲಾರಿ ಚಲಾಯಿಸಿ ಬರುತ್ತಿರುವುದನ್ನು ಕಂಡ ಕರ್ತವ್ಯದಲ್ಲಿದ್ದ

ಮುಂಡಗೋಡ ಪಿ.ಎಸ್. ಐ ಬಸವರಾಜ ಮಬನೂರು ನಿಲ್ಲಿಸಲು ಸೂಚಿಸಿದರೂ ನಿಲ್ಲಿಸದೆ ಹೋದ ಕಾರಣ ಪಟ್ಟಣದ ಸಂಕಲ್ಪ ಕ್ರಾಸ್ ಬಳಿ ತಡೆ ಹಿಡಿದು ಪರಿಶೀಲಿಸಿದಾಗ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ 6 ಒಂಟೆಗಳನ್ನು ಹಗ್ಗದಲ್ಲಿ ಕಟ್ಟಿ ಯಾವುದೇ ಪಾಸ್ ಇಲ್ಲದೇ ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಕಂಡು ಬಂದ ಕಾರಣ 5 ಲಕ್ಷ ರೂಪಾಯಿ ಮೌಲ್ಯದ ಲಾರಿ ಸಮೇತ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಪಿ.ಎಸ್. ಐ ಮಂಜುನಾಥ ಗೌಡರ್ ತನಿಖೆ ಕೈಗೊಂಡಿದ್ದಾರೆ.

Leave a Comment