ಹೊನ್ನಾವರ : ತಮ್ಮ ಲಾಭಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಇಸ್ಟೀಟ್ ಅಡ್ಡೆಯ ಮೇಲೆ ಹಣವನ್ನು ಪಂಥವನ್ನಾಗಿ ಅಂದರ್ ಬಾಹರ್ ಜೂಗರಾಟ ನಡೆಸುವಾಗ ಪೊಲೀಸರು ದಾಳಿ ನಡೆಸಿದ್ದು, 2230 ನಗದು ಹಾಗೂ ಸಲಕರಣೆ, ಸ್ಥಳದಲ್ಲಿದ್ದ ನಾಲ್ಕು ಬೈಕ್ ಹಾಗೂ ಒಂದು ಆಟೋ ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಹೊಸಾಡ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಅಂದರ್ – ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಪಿಎಸೈ ಮಹಾಂತೇಶ ನಾಯಕ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಇದೇ ವೇಳೆ ಮಾವಿನಕುರ್ವಾದ ಸೀತಾರಾಂ ನಾಯ್ಕ, ಪ್ರಸನ್ನ, ಮಂಜು ಅಂಬಿಗ, ನಾಗರಾಜ ಅಂಬಿಗ, ಹರೀಶ ಅಂಬಿಗ, ವಿನೋದ ಅಂಬಿಗ, ಶೇಖರ ಅಂಬಿಗ, ಮಾರುತಿ ಗೌಡ, ಭರತ ನಾಯ್ಕ, ಉಮೇಶ ಗೌಡ, ಖರ್ವಾದ ತಿಮ್ಮಪ್ಪ ಗೌಡ, ಕೊರೆಯ ಶ್ರೀಧರ ಗೌಡ, ವಲ್ಕಿಯ ಈಶ್ವರ ಪಟಗಾರ, ಲಕ್ಷಣ ಹಳ್ಳೇರ, ನಾಥಗೇರಿಯ ಮಹಾಬಲೇಶ್ವರ ನಾಯ್ಕ, ಜಲವಳ್ಳಿಯ ವಾಮನ ನಾಯ್ಕ, ಕೃಷ್ಣ ನಾಯ್ಕ, ದೇವೇಂದ್ರ ನಾಯ್ಕ, ಅಳ್ಳಂಕಿಯ ಅಶೋಕ ನಾಯ್ಕ, ಹೊಳೆಕೇರಿಯ ತಿವಿಕ್ರಮ ಯಾನೇ, ನಾಗರಾಜ ಇವರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment