ಹೊನ್ನಾವರ : ತಾಲೂಕಿನಲ್ಲಿ ವರುಣಾರ್ಭಟ ಕೊಂಚ ಇಳಿಮುಖವಾದರು ತಾಸಿಗೊಮ್ಮ ಜೋರಾದ ಗಾಳಿ ಸಹಿತ ಬೀಳುವ ಮಳೆಗೆ ಮನೆಗಳಿಗೆ ಹಾನಿಯಾಗುತ್ತಿರುವ ಪ್ರಮಾಣ ದಿನೇ ದಿನೇ ಏರುತ್ತಲೇ ಇದೆ.
ಮಾಡಗೇರಿಯ ನಾರಾಯಣ ಆಚಾರಿ ಅವರ ಪಕ್ಕಾ ಮನೆಗೆ ತೀವ್ರ ಹಾನಿಯಾಗಿ 70,000 ನಷ್ಟವಾಗಿದೆ. ಕರ್ಕಿಯ ಮಾರುತಿ ಪಾಂಡುರAಗ ಶೇಟ್ ಅವರ ಪಕ್ಕಾ ಮನೆಗೆ ತೀವ್ರ ಹಾನಿಯಾಗಿ 80,000 ಹಾನಿಯಾಗಿದೆ. ಮಾಡಗೇರಿಯ ಕೃಷ್ಣ ಚಿನ್ನು ಆಚಾರಿಯವರ ಪಕ್ಕಾಮನೆಗೆ ಭಾಗಶಃ ಹಾನಿಯಾಗಿ 19,400 ನಷ್ಟವಾಗಿದೆ. ಹೊನ್ನಾವರದ ವೆಂಕಟೇಶ ರಾಮದಾಸ ಮೊಗೇರ ಅವರ ಪಕ್ಕಾ ಮನೆಗೆ ಭಾಗಶಃ ಹಾನಿಯಾಗಿ 25,000 ನಷ್ಟವಾಗಿದೆ. ಕುಳಕೋಡದ ವಿನುತಾ ವಸಂತ ದೇಶಭಂಡಾರಿಯವರ ಕಚ್ಚಾ ಮನೆಗೆ ಭಾಗಶಃ ಹಾನಿಯಾಗಿ 10,000 ನಷ್ಟವಾಗಿದೆ.
.
ಮಂಕಿಯ ಈಶ್ವರ ಬಾಳು ಮೊಗೇರ ಅವರ ಪಕ್ಕಾ ಮನೆಗೆ ಭಾಗಶಃ ಹಾನಿಯಾಗಿ 15,000 ನಷ್ಟ, ಜಲವಳ್ಳಿಯ ಶ್ಯಾಮಲಾ ಮಂಜುನಾಥ ನಾಯ್ಕ ಅವರ ಪಕ್ಕಾ ಮನೆಗೆ ಭಾಗಶಃ ಹಾನಿಯಾಗಿ 16,500 ನಷ್ಟ ಅಂದಾಜಿಸಲಾಗಿದೆ.
Leave a Comment