ಭಟ್ಕಳ: ಸದಾನಂದ ನಾಯ್ಕ ಮಾಲಿಕತ್ವದ ಶ್ರೀ ಆಂಜನೆಯ ಜನರಲ್ ಸ್ಟೋರ್ ನ ಕಿರಾಣಿ ಅಂಗಡಿಯಲ್ಲಿ ಕಳ್ಳತನವಾಗಿದೆ. ಅಂಗಡಿಯಲ್ಲಿದ್ದ 10 ಸಾವಿರ ನಗದು ಹಾಗೂ ಸಿಗರೇಟ್ ಪ್ಯಾಕೇಟ್ ಕದ್ದು ಕಳ್ಳರು ಪರಾರಿಯಾಗಿದ್ದಾರೆ.
ಮಣ್ಣುಳಿಯ ಪುಷ್ಪಾಂಜಲಿ ಚಿತ್ರಮಂದಿರದ ಮುಂಭಾಗದಲ್ಲಿರುವ ಕಿರಾಣಿ ಅಂಗಡಿಯೊAದರ ಒಳ ನುಗ್ಗಿರುವ ಕಳ್ಳರು, ನಗದು ಹಾಗೂ ಸಿಗರೇಟ್ ಪ್ಯಾಕೆಟ್ ಕದ್ದೊಯ್ದ ಘಟನೆ ನಡೆದಿದೆ.
ಕಳೆದ ಮೂರ್ನಾಲ್ಕು ತಿಂಗಳಿನಿAದ ಈ ಭಾಗದಲ್ಲಿ ಅನೇಕ ಬಾರಿ ಕಳ್ಳತನಗಳು ನಡೆಯುತ್ತಲಿದೆ. ಈ ಮೊದಲು ರಾತ್ರಿ ನಿಲ್ಲಿಸಿಟ್ಟ ಬೈಕ್ನ ಬ್ಯಾಟರಿ ಕದಿಯುತ್ತಿದ್ದ ಕಳ್ಳರು ನಂತರದ ದಿನಗಳಲ್ಲಿ ಈ ಭಾಗದಲ್ಲಿರುವ ಮನೆ, ಹೋಟೆಲ್ ಹಾಗೂ ತೋಟದ ಬಾವಿಯಲ್ಲಿದ್ದ ಪಂಪ್ಸೆಟ್ ಕಳ್ಳತನ ಮಾಡುತ್ತಿದ್ದರು. ಈಗ ಅಂಗಡಿ ಕಳ್ಳತನಕ್ಕೆ ಇಳಿದಿದ್ದಾರೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
Leave a Comment