ಭಟ್ಕಳ: ತಾಲೂಕಿನ ಎಸಿ ಕಚೇರಿ ಸಮೀಪ ಇಬ್ಬರು ಯುವಕರನ್ನು ಅಡ್ಡಗಟ್ಟಿದ ವ್ಯಕ್ತಿಯೋರ್ವ ಅವಚ್ಯಾ ಶಬ್ದದಿಂದ ಬೈದು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಹಲ್ಲೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಕಿರಣಕುಮಾರ ಕೋಟೇಶ್ವರ ರಸ್ತೆಯ ಎ.ಎಂ.ಸಿ ಕಾಲೋನಿ ನಿವಾಸಿ ಎಂದು ತಿಳಿದು ಬಂದಿದೆ. ಈ ಬಗ್ಗೆ ಗಾಯಗೊಂಡ ವ್ಯಕ್ತಿಯ ತಾಯಿ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನ್ನ ಇಬ್ಬರು ಮಕ್ಕಳು ಆಸ್ಪತ್ರೆ ರಸ್ತೆ ಎಸಿ ಕಚೇರಿ ಸಮೀಪದ ಫಾಸ್ಟ್ ಫುಡ್ ಅಂಗಡಿಯಲ್ಲಿ ಫಾಸ್ಟ್ ಫುಡ್ ತಿಂದು ಮನೆಗೆ ಹಿಂತಿರಿಗುವ ವೇಳೆ ಆರೋಪಿ ಕುಮಾರ ಮಾದೇವ ಪುಟ್ಟ ಕೋರಾರ್ ಇಬ್ಬರನ್ನು ಅಡ್ಡಗಟ್ಟಿ ನಿನ್ನ ತಂದೆ ಎಲ್ಲಿದ್ದಾನೆ ಅವನನ್ನು ಎಲ್ಲಿಗೆ ಕರೆ ಎಂದು ಅವಚ್ಯಾ ಶಬ್ದದಿಂದ ಬೈದಿದ್ದಾನೆ.
ಆಗ ಪಿರ್ಯಾದಿಯ ಮಕ್ಕಳು ಆರೋಪಿಗೆ ನೀನು ನಮ್ಮನ್ನು ಬೇಕಾದರೆ ಬೈ ನಮ್ಮ ತಂದೆಯವರಿಗೆ ಬೈಯಬೇಡ ಎಂದು ಎಂದು ಹೇಳಿದಾಗ ಆರೋಪಿ ಒಮ್ಮೆಲೇ ಏಕಾಏಕಿ ಅವರ ಮೇಲೆ ಎರಿ ಹೋಗಿ ಕಿರಣಕುಮಾರ ಈತನಿಗೆ ಕೈಯಿಂದ ಹೊಡೆದು ಯಾವುದೋ ಗಟ್ಟಿಯಾದ ವಸ್ತುವಿನಿಂದ ಹೊಡೆದು ಕೊಂದು ಹಾಕುತ್ತೇನೆ ಎಂದು ಹೇಳಿ ಅಲ್ಲಿಂದ ಪಾರರಿಯಾದ್ದಾನೆ .ನಂತರ ಗಾಯಾಳುವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.
ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಹಲ್ಲೆಗೊಳಗಾದ ವ್ಯಕ್ತಿಯ ತಾಯಿ ಪ್ರಕರಣ ದಾಖಲಿಸಿದ್ದಾರೆ
Leave a Comment