
ಯಲ್ಲಾಪುರ : ಜಿಲ್ಲಾ ಗ್ರಾಮ ಪಂಚಾಯತಿ ನೌಕರರ ಸಂಘ (ಸಿಐಟಿಯು) ವತಿಯಿಂದಪಟ್ಟಣದ ಎ.ಪಿ.ಎಮ್.ಸಿ. ಇಂದ ಸಚಿವ ಶಿವರಾಮ ಹೆಬ್ಬಾರ್ ರವರ ಕಚೇರಿಯ ವರೆಗೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯತಿ ನೌಕರರಿಗೆ ಕಾನೂನಿ ಅನ್ವಯ 5 ವರ್ಷಕ್ಕೆ ಅನುಗುಣವಾಗಿ ಕನಿಷ್ಠ ವೇತನ ನಿಗದಿ ಪಡಿಸುಬೇಕು. ಗ್ರಾಮ ಪಂಚಾಯತಿ ನೌಕರರಿಗೆ ಕನಿಷ್ಟ ವೇತನ ನಿಗದಿ ಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ (ಸಿಐಟಿಯು) ಉತ್ತರಕನ್ನಡ ಜಿಲ್ಲಾ ಸಮಿತಿ ವತಿಯಿಂದ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಬುಧವಾರ ಪಟ್ಟಣದ ಎ.ಪಿ.ಎಮ್.ಸಿ. ಇಂದ ಸಚಿವರ ಕಚೇರಿಯ ವರೆಗೆ ಪ್ರತಿಭಟನೆ ನಡೆಸಿ, ಗ್ರಾಮ ಪಂಚಾಯತಿ ನೌಕರರಿಗೆ ಕಾನೂನಿ ಅನ್ವಯ 5 ವರ್ಷಕ್ಕೆ ಅನುಗುಣವಾಗಿ ಕನಿಷ್ಠ ವೇತನ ನಿಗದಿ ಪಡಿಸುಬೇಕು. ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ 2016 ರಿಂದ ಸರ್ಕಾರದ ಆದೇಶದಂತೆ ವಾರ್ಷಿಕವಾಗಿ ನೌಕರರಿಗೆ ನೀಡಬೇಕಾದ ಕನಿಷ್ಠ ವೇತನ ಮತ್ತು ತುಟ್ಟಿ ಭತ್ಯೆಯನ್ನು ನೀಡದೆ ಬಾಕಿ ಉಳಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮ ಪಂಚಾಯತಿಗಳಲ್ಲಿ ದುಡಿದು ನಿವೃತ್ತಿಯಾದ ನೌಕರರಿಗೆ ಉಪಧನ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಗ್ರಾಮ ಪಂಚಾಯತಿ ನೌಕರರಾದ ಕರವಸೂಲಿಗಾರ, ಗುಮಾಸ್ತ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ವಾಟರ್ಮ್ಯಾನ್, ಜವಾನ, ಸ್ವಚ್ಛತೆಗಾರರು ಸೇರಿದಂತೆ ಇತ್ಯಾದಿ ನೌಕರರಿಗೆ 2016 ರಿಂದ ಕನಿಷ್ಠ ವೇತನ ನಿಗದಿಪಡಿಸಲಾಗಿತ್ತು ಹಾಗೂ ಪ್ರತಿ 5 ವರ್ಷಗಳ ಮೀರದ ಅಂತರದಲ್ಲಿ ಕನಿಷ್ಠ ವೇತನ ಪರಿಷ್ಕರಣೆ ಆಗಬೇಕು ಎನ್ನುವುದು ಶಾಸನಬದ್ಧ ಹೊಣೆಯಾಗಿತ್ತು. ಈ ಕುರಿತು ಇದ್ದ ಆಕ್ಷೇಪಗಳನ್ನು ಈ ಹಿಂದೆಯೂ ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿತ್ತಾದರೂ, ಕ್ರಮ ಕೈಗೊಳ್ಳದೇ ಇರುವುದರಿಂದ ಸಚಿವರ ಬಳಿ ಮನವಿ ಮೂಲಕ ತಮ್ಮ ಬೇಡಿಕೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಮಕ್ತಾ ಪೂಜಾರಿ, ಪ್ರಧಾನ ಕಾರ್ಯದರ್ಶಿ ಟಿ.ಎಮ್. ಗುರುಬನ್ನಾವರ, ಖಜಾಂಚಿ ಜೆ.ಸಿ. ಮಿರಾಶಿ, ಜಿಲ್ಲಾ ಕಾರ್ಯದರ್ಶಿ ನಾಗಪ್ಪ ನಾಯ್ಕ, ಕೆ.ಎಮ್. ಮುಲ್ಲಾ ಹಾಗೂ ಸಂಘದ ಸದಸ್ಯರು ಇದ್ದರು.
Leave a Comment