ಹೊನ್ನಾವರ : ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಪಟ್ಟಣದ ಗೇರುಸೊಪ್ಪಾ ವೃತ್ತದಲ್ಲಿ ರಾಷ್ಟಿçÃಯ ಹೆದ್ದಾರಿಯಲ್ಲೆ ಪಲ್ಟಿಯಾದ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಮಹಾರಾಷ್ಟç ನೋಂದಣಿಯ ಲಾರಿಯು ಮಂಗಳೂರು ಕಡೆ ಸಕ್ಕರೆ ತುಂಬಿಕೊAಡು ಸಾಗುತ್ತಿದ್ದಾಗ ಪಟ್ಟಣದ ಗೇರುಸೊಪ್ಪಾ ಸರ್ಕಲ್ ತಿರುವಿನಲ್ಲಿ ಪಲ್ಟಿಯಾಗಿದೆ. ನಿಯಂತ್ರಣ ತಪ್ಪಿದ ಲಾರಿಯು ತಿರುವಿನಲ್ಲಿರುವ ವಿದ್ಯತ್ ಟ್ರಾನ್ಸ್ ಫಾರ್ಮರ್ ಗೆ ಡಿಕ್ಕಿ ಹೊಡೆದಿದ್ದು, ಒಂದು ವಿದ್ಯತ್ ಕಂಬ ಮುರಿದು ಬಿದ್ದು ಟ್ರಾನ್ಸ್ ಫಾರ್ಮರ್ ಸುಟ್ಟುಹೋಗಿದೆ.
ಅಪಘಾತದಲ್ಲಿ ಚಾಲಕ ಮತ್ತು ನಿರ್ವಾಹಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೆಲಕ್ಕೆ ಬಿದ್ದಿದ್ದ ಸಕ್ಕರೆ ಚೀಲಗಳನ್ನು ಬೇರೆ ಲಾರಿಗೆ ಶಿಷ್ಟ್ ಮಾಡಿ ನಂತರ ಕ್ರೇನ್ ಮೂಲಕ ಲಾರಿ ತೆರವು ಮಾಡುವ ಮೂಲಕ ರಸ್ತೆ ಸಂಚಾರಕ್ಕೆ ಪೊಲೀಸರು ಸುಗಮಗೊಳಿಸಿದರು. ಮಧ್ಯರಾತ್ರಿಯಿಂದ ವಿದ್ಯತ್ ಸಂಪರ್ಕ ಕೈಕೊಟ್ಟ ಕಾರಣದಿಂದ ಪಟ್ಟಣದ ನಿವಾಸಿಗಳಿಗೆ ಕಹಿ ಅನುಭವವಾಯಿತು.
ವಿದ್ಯತ್ ಕಂಬ ಹಾಗೂ ಟ್ರಾನ್ಸ್ಫಾರ್ಮರ್ ಸರಿಪಡಿಸುವಲ್ಲಿ ಹೆಸ್ಕಾಂ ಸಿಬ್ಬಂದಿ ಶ್ರಮವಹಿಸಿ ಮಧ್ಯಾಹ್ನದ ವೇಳೆಗೆ ಸಂಪರ್ಕ ಕಲ್ಪಸಿದ್ದಾರೆ.
ಐಆರ್‌ಬಿ ಅವೈಜ್ಞಾನಿಕ ಕಾಮಗಾರಿ ಕಾರಣ
ಸರ್ಕಲ್ ಭಾಗ ಅಪಘಾತ ವಲಯವಾಗಿ ಮಾರ್ಪಟ್ಟಿದ್ದರು. ಐಆರ್‌ಬಿಯವರು ಮುಖ್ಯಮಂತ್ರಿ ಆಗಮನದ ಹಿನ್ನಲೆ ತರಾತುರಿಯಲ್ಲಿ ಹೆದ್ದಾರಿ ಹೊಂಡ ಮಚ್ಚಲು ಮುಂದಾಗಿದ್ದರು. ಇದರಿಂದ ಸರ್ಕಲ್ ಬಳಿ ಜಲ್ಲಿ ರಾಶಿ ಸರಿದಿರುವುದರಿಂದ ರಸ್ತೆ ಕಿರಿದಾಗಿತ್ತು. ಈ ಕಾರಣದಿಂದಲೆ ಲಾರಿ ಪಲ್ಟಿಯಾಗಿದೆ ಎಂದು ಕನ್ನಡಪರ ಸಂಗಟನೆಯವರು ಆಕ್ರೋಶ ವ್ಯಕ್ತಪಡಿಸಿ, ತಿರುವಿನಲ್ಲಿರುವ ಜಲ್ಲಿಗಳನ್ನು ತೆಗೆಯುವಂತೆ ಆಗ್ರಹಿಸಿ ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳ ಭರವಸೆಯ ಬಳಿಕ ಪ್ರತಿಭಟನೆ ವಾಪಸ್ಸು ಪಡೆದರು. ಕರುನಾಡು ವಿಜಯಸೇನೆಯ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ, ಜಿಲ್ಲಾ ವಕ್ತಾರ ಶ್ರಿರಾಮ, ಕರವೇ ತಾಲೂಕು ಅಧ್ಯಕ್ಷ ಮಂಜುನಾಥ ಗೌಡ ಸೇರಿದಂತೆ ಸದಸ್ಯರು, ಸಾರ್ವಜನಿಕರು ಹೆದ್ದಾರಿ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
Leave a Comment