ಹೊನ್ನಾವರ : ತಾಲೂಕಿನ ನಾಮಧಾರಿ ನೌಕರ ಸಂಘದ ವತಿಯಿಂದ ಜುಲೈ 24 ರಂದು ಪಟ್ಟಣದ ನಾಮಧಾರಿ ಸಂಘದ ವಿದ್ಯಾರ್ಥಿನಿಲಯದಲ್ಲಿ 2021-2022 ನೇ ಸಾಲಿನ ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಹಾಗೂ ಪಿಯುಸಿಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಪಡೆದ ನಾಮಧಾರಿ ಸಮಾಜದ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಗುತ್ತದೆ.
ಇದೇ ವೇಳೆ ಆರ್ಥಿಕವಾಗಿ ಅತ್ಯಂತ ಬಡ ಕುಟುಂಬದ ಪ್ರತಿಭಾವಂತ 5 ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಲಾಗುವುದು ಎಂದು ನಾಮಧಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಸುಧೀಶ ನಾಯ್ಕ ಪತ್ತು ಕಾರ್ಯದರ್ಶಿ ಎಂ.ಜಿ.ನಾಯ್ಕ ತಿಳಿಸಿದ್ದಾರೆ.
ಪ್ರತಿಭಾ ಪುರಸ್ಕಾನಕ್ಕೆ ಅರ್ಹ ನಾಮಧಾರಿ ಸಮಾಜದ ವಿದ್ಯಾರ್ಥಿಗಳು ಜುಲೈ 18 ರೊಳಗೆ ತಮ್ಮ ಅರ್ಜಿಯ ಜೊತೆಗೆ ಅಂಕಪಟ್ಟಿ ಮತ್ತು ಆಧಾರ್ ಕಾರ್ಡ್ ನಕಲು ಪ್ರತಿಯನ್ನು ಲಗತ್ತಿಸಿ ಸುದೀಶ ನಾಯ್ಕ ತಾಲೂಕ ಪಂಚಾಯತಿ ಕಾರ್ಯಾಲಾಯದಲ್ಲಿ ನೀಡುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸುಧೀಶ ನಾಯ್ಕ (ಮೊ.ಸಂ : 94485 30726), ಎಂ.ಜಿ.ನಾಯ್ಕ (ಮೊ.ಸಂ: 94802 11578). ರಾಜಕುಮಾರ ನಾಯ್ಕ (ಮೊ.ಸಂ: 94489 34039). ಕಿಶೋರ ನಾಯ್ಕ (ಮೊ.ಸಂ: 94481 09133) ಅವರನ್ನು ಸಂಪರ್ಕಿಸಬಹುದಾಗಿದೆ.
Leave a Comment