ಧಾರವಾಡ : ಬ್ಯಾಂಕ್ ನಲ್ಲಿ ಸಾಲದ ಬಾಕಿ ಅಥವಾ ಬೇರೆ ಯಾವುದೇ ರೀತಿಯ ಹಣ ಕೊಡುವುದು ಬಾಕಿ ಇರದಿದ್ದರೂ ಹಲವು ಬಾರಿ ಗ್ರಾಹಕರೊಬ್ಬರಿಗೆ ನೊಟೀಸ್ ನೀಡಿ ಗೌರವಕ್ಕೆ ಚ್ಯುತಿ ತಂದಿದ್ದರಿAದ ಧಾರವಾಡದ ಎಚ್ ಡಿ ಎಂಸಿ ವೃತ್ತದ ಎಸ್‌ಬಿಐ ಶಾಖೆ ಹಾಗೂ ಕೇಶ್ವಾಪುರ ಎಸ್‌ಬಿಐ ಶಾಖೆಗೆ ದಂಡ ವಿಧಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದವರು ಸಾಲದ ಬಾಕಿ ಭರಿಸುವಂತೆ ಧಾರವಾಡ ಯಾದಗಿರಿ ಚಾಳನ ಕರುಣಾಕರ ಚಂದ್ರಯ್ಯ ಶೆಟ್ಟಿ ಅವರಿಗೆ ಹಲವು ಬಾರಿ ನೋಟಿಸ್ ನೀಡಿದ್ದರು.
ಕರುಣಾಕರ ಅವರನ್ನು ಸುಸ್ತಿ ಬಾಕಿದಾರ ಎಂದು ಕರೆದಿದ್ದರು. ಬ್ಯಾಂಕ್ ನವರಿಂದ ಸೇವಾ ನ್ಯೂನತೆಯಾಗಿದ್ದು, ಗೌರವಕ್ಕೆ ಚ್ಯುತಿ ಬಂದಿದೆ ಎಂದು ಕರಣಾಕರ ಶೆಟ್ಟಿ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪರಿಹಾರ ಕೇಳಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ಆಯೋಗ, ಯಾವುದೇ ಸಾಲ ಭರಿಸುವುದು ಬಾಕಿ ಇರದಿದ್ದರೂ ಸಾಲ ಭರಿಸುವಂತೆ ನೋಟಿಸ್ ನೀಡಿದೆ ಹಿನ್ನಲೆಯಲ್ಲಿ ಗ್ರಾಹಕರ ವರ್ಚಸ್ಸಿಗೆ ಧಕ್ಕೆಯಾಗಿದೆ.
ಸೇವಾ ನ್ಯೂನತೆಯಾಗಿದೆ ಎಂದು ಅಭಿಪ್ರಾಯಪಟ್ಟು, ದೂರುದಾರ ಕರುಣಾಕರ ಶೆಟ್ಟಿಗೆ 1,10,000 ರೂ. ಪರಿಹಾರ ನೀಡಬೇಕು. ಎಂದು ತೀರ್ಪು ನೀಡಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿ.ಎ. ಬೋಳೆಶೆಟ್ಟಿ, ಪಿ.ಸಿ. ಹೀರೇಮಠ ತೀರ್ಪು ನೀಡಿದ್ದಾರೆ.
Leave a Comment