ಧಾರವಾಡ : ಶತಮಾನ ಕಂಡಿರುವ ಧಾರವಾಡ ನಗರದ ಶಿಕ್ಷಕಿಯರ ಸರಕಾರಿ ತರಬೇತಿ ಸಂಸ್ಥೆಯಲ್ಲಿ (ಕಲಾಭವನದ ಎದುರುಗಡೆ) ಪ್ರಸುತ್ತ 2022 – 23 ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕನ್ನಡ/ಇಂಗ್ಲಿಷ್/ಉರ್ದು ಮಾಧ್ಯಮಗಳಲ್ಲಿ ಡಿಎಲ್‌ಇಡಿ ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಿದೆ.
ಹೆಣ್ಣು ಮಕ್ಕಳಿಗೆ ಡಿಎಲ್‌ಇಡಿ ತರಬೇತಿ ಪಡೆಯಲು ಅವಕಾಶ ಒದಗಿಸಲಾಗಿದ್ದು, ಕಲಾ/ವಿಜ್ಞಾನ/ವಾಣಿಜ್ಯ ವಿಷಯದಲ್ಲಿ ಪಿಯುಸಿ ತೆರ್ಗಡೆ ಹೊಂದಿದ ವಿದ್ಯಾರ್ಥಿನಿಯರು ಹಾಗೂ ಪದವಿಧರ ವಿದ್ಯಾರ್ಥಿನಿಯರು ಕೂಡ ಈ ಕೋರ್ಸ್ಗೆ ಪ್ರವೇಶ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಆ.31 ರವರೆಗೆ ಕಾಲಾವಕಾಶ ನೀಡಲಾಗಿದ್ದು, ಆಸಕ್ತರು ಕೂಡಲೇ ಸಂಸ್ಥೆಗೆ ಭೇಟಿ ನೀಡಲು ತಿಳಿಸಿದೆ.
ಸಂಸ್ಥೆಯಲ್ಲಿ ಮೂಲಭೂತ ಸೌಕರ್ಯಗಳಾದ ವಸತಿ ನಿಲಯ, ಕಪ್ಯೂಟರ ತರಬೇತಿ ಟಿ,ಇ,ಟಿ/ಸಿ.ಇಟಿ ತರಬೇತಿ, ಉಚಿತ ಮಾರ್ಗದರ್ಶನ ಮಾಡಲಾಗುವುದು. ನುರಿತ ಸಿಬ್ಬಂದಿ ವರ್ಗದ ಜೊತೆಗೆ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ ಅಧಿಕಗೊಳಿಸಲು ಪೂರಕವಾದ ವಿಜ್ಞಾನ ಪ್ರಯೋಗಾಲಯ, ಗ್ರಂಥಲಯ ಸೌಲಭ್ಯ ಹಾಗೂ ವಿದ್ಯಾರ್ಥಿ ವೇತನ ಸೌಲಭ್ಯವಿದೆ. ಡಿಎಲ್‌ಇಡಿ ತರಬೇತಿ ಪಡೆಯಲು ಮೊ.ಸಂ : 94485 08383, 95384 20091, 93808 40834, 97429 11875, 94806 29832, 94485 64218ಗೆ ಸಂಕರ್ಪಿಸುವAತೆ ತರಬೇತಿ ಸಂಸ್ಥೆಯ ಪ್ರಾಚಾರ್ಯ ಬಿ.ಎಮ್.ಬಡಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment