ಭಟ್ಕಳ: ಉ.ಕ ಜಿಲ್ಲೆಯಲ್ಲಿ ಸತತವಾಗಿ ಕಳೆದ ೧೫ದಿನಗಳಿಂದ ಮಳೆ ಬೀಳುತ್ತಿದ್ದು ಜನರು ಭೀತಿಯಲ್ಲಿ ಬದುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡದೆ ಮಳೆ ಪರಿಹಾರ ನೀಡುವಲ್ಲಿ ಉ.ಕ ಜಿಲ್ಲೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ವೆಲ್ಫೇರ್ ಪಾರ್ಟಿ ಕರ್ನಾಟಕದ ರಾಜ್ಯಧ್ಯಕ್ಷ ಅಡ್ವಕೇಟ್ ತಾಹೀರ್ ಹುಸೇನ್ ಆರೋಪಿಸಿದ್ದಾರೆ.
ಅವರು ಶನಿವಾರ ಭಟ್ಕಳಹೊನ್ನಾವರ ವಿಧಾನಸಭಾ ಕ್ಷೇತ್ರದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಮಳೆಯಿಂದಾಗಿ ಉ.ಕ ಜಿಲ್ಲೆಯಲ್ಲಿ ಅತ್ಯಂತ ಅನಾಹುತಗಳು ಸಂಭವಿಸಿದ್ದು ಸಾವಿರಾರು ಮಂದಿ ಸಂತೃಸ್ತರಾಗಿದ್ದಾರೆ. ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಿರಲಿ, ಚಂದಾವರ, ಅಳ್ವೆಕೋಡಿ ಮತ್ತಿತರ ಮಳೆ ಪ್ರಭಾವಿತ ಪ್ರದೇಶಗಳಿಗೆ ಭೇಟಿ ಸಂತೃತ್ತರೊAದಿಗೆ ಮಾತುಕತೆ ನಡೆಸಿದ ಅವರು, ಉ.ಕ. ಜಿಲ್ಲೆಯಲ್ಲಿ ೫ ಬಿಜೆಪಿಯ ಶಾಸಕರಿದ್ದರೂ ತಮ್ಮ ಮುಖ್ಯಮಂತ್ರಿಯನ್ನು ಜಿಲ್ಲೆಗೆ ಕರೆಸಿಕೊಳ್ಳಲು ವಿಫಲರಾಗಿದ್ದಾರೆ.
ಅಲ್ಲದೇ ಶನಿವಾರದಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪುಜಾರಿ ಕೇವಲ ಕಾಟಚಾರದ ಸಭೆ ನಡೆಸಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಪ್ರಕೃತಿ ವಿಕೋಪದಿಂದ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದ ಸಚಿವರು ಕೇವಲ ಅಧಿಕಾರಿಗಳಿಗೆ ಆದೇಶ ನೀಡಿದ್ದು ಅಮಾನವೀಯವಾಗಿದೆ. ಇದು ತೀರ ಖಂಡನೀಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಗಂಜಿ ಕೇಂದ್ರ ತೆರೆಯುವ ವ್ಯವಸ್ಥೆಯೂ ಕೂಡ ಆಡಳಿತ ಮಾಡಿಲ್ಲ.
ಕೇವಲ ಕಾಟಾಚಾರಕ್ಕೆ ೨-೩ ಸಾವಿರ ರೂಪಾಯಿ ನೀಡಿದ್ದಾರೆ. ಇದು ಯಾವುದಕ್ಕೂ ಸಾಕಾಗುವುದಿಲ್ಲ. ಕೇವಲ ಎ.ಸಿ ರೂಮಿನಲ್ಲಿ ಕುಳಿತು ಸಭೆ ನಡೆಸಿದರೆ ಸಾಲದು ಜನರ ಕಷ್ಟನೋವು ತಿಳಿದುಕೊಳ್ಳಲು ಅವರ ಬಳಿ ಹೋಗಬೇಕು. ಸರ್ಕಾರ ಉ.ಕ ಜಿಲ್ಲೆಯ ಪೀಡಿತ ಜನರಿಗೆ ಕೂಡಲೇ ಸಮರ್ಪವಾದ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಅಳ್ವೇಕೋಡಿಯ ಗುರುರಾಜ್ ಎಂಬುವವರು ನಾವು ಮಳೆಯಿಂದಾಗಿ ತುಂಬಾ ನಷ್ಟವನ್ನು ಅನುಭವಿಸಿದ್ದೇವೆ. ಇದುವರೆಗೂ ನಮಗೆ ಯಾವುದೇ ಪರಿಹಾರ ದೊರೆತಿಲ್ಲ. ಕೇವಲ ಬಂದುಹೋಗುವುದಷ್ಟೇ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಹಲವು ಮಹಿಳಯರು ಕೂಡ ತಮ್ಮ ನೋವುವನ್ನು ತೋಡಿಕೊಂಡಿದ್ದು ನಮಗೆ ಶಾಶ್ವತ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಮಧ್ಯಮ ಕಾರ್ಯದರ್ಶಿ ಅಝೀಝ್ ಜಾಗಿದಾರ್, ಉ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸೀಫ್ ಶೇಖ್ ಮತ್ತಿತರರು ಉಪಸ್ತಿತರಿದ್ದರು.
Leave a Comment