ಕಾರವಾರ : ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಅಧಿಕಾರಿಗಳು ಜು. 20 ರಂದು ಕುಮಟಾ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಯಿAದ ಮಧ್ಯಾಹ್ನ 1 ಗಂಟೆಯವರೆಗೆ, ಮಧ್ಯಾಹ್ನ 3 ಗಂಟೆಯಿAದ ಸಂಜೆ 5 ಗಂಟೆಯವರೆಗೆ ಅಂಕೋಲಾ ಪ್ರವಾಸಿ ಮಂದಿರ, ಮತ್ತು ಜು. 21 ರಂದು ಬೆಳ್ಳಿಗೆ 11 ಗಂಟೆಯಿAದ ಮಧ್ಯಾಹ್ನ 1 ಗಂಟರೆಯವರೆಗೆ ಸಿದ್ದಾಪುರ ಪ್ರವಾಸಿ, ಮಂದಿರ, ಮಧ್ಯಾಹ್ನ 3 ಗಂಟೆಯಿAದ ಸಂಜೆ 5 ಗಂಟೆಯವರೆಗೆ ಮುಂಡಗೋಡ ಪ್ರವಾಸಿ, ಮಂದಿರ ಹಾಗೂ ಜು. 22 ರಂದು ಬೆಳ್ಳಿಗೆ 11 ಗಂಟೆಯಿAದ ಮಧ್ಯಾಹ್ನ 1 ಗಂಟೆಯವರೆಗೆ ದಾಂಡೇಲಿ ಪ್ರವಾಸಿ ಮಂದಿರ, ಮಧ್ಯಾಹ್ನ 3 ಗಂಟೆಯಿAದ ಸಂಜೆ 5 ಗಂಟೆಯವರೆಗೆ ಹಳಿಯಾಳ ಪ್ರವಾಸಿ ಮಂದಿರಗಳಲ್ಲಿ ಸಾರ್ವಜನಿಕರಿಂದ ಅಹವಾಲನ್ನು ಮತ್ತು ಅರ್ಜಿಗಳನ್ನು ಸ್ವೀಕರಿಸಿಕೊಳ್ಳುತ್ತಾರೆ.
ಜಿಲ್ಲೆ ಮತ್ತು ತಾಲೂಕಿನ ಯಾವುದೇ ಸರ್ಕಾರಿ ಕಾರ್ಯಾಲಯದಲ್ಲಿ ಸಾರ್ವಜನಿಕರಿಗೆ ಕೆಲಸ ಮಾಡಿಕೊಡುವಲ್ಲಿ ಅನವಶ್ಯಕ ವಿಳಂಬ ಅಥವಾ ಲಂಚ ಕೇಳಿದರೆ ನೇರವಾಗಿ ಎ.ಸಿ.ಬಿ ಅಧಿಕಾರಿಗಳು ಕಾರವಾರರಗಳ ಮೊಬೈಲ್ ಸಂಖ್ಯೆ 9480806234, 9480806297, ಹಾಗೂ 9480806298 ಗೆದೂರು ನೀಡಬಹುದು ಎಂದು ಜಿಲಾ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ನಿರೀಕ್ಷಕರು ತಿಳಿಸಿದ್ದಾರೆ.
Leave a Comment