ಬೆಂಗಳೂರು :
ದೇಶ ಸ್ವಾತಂತ್ರö್ಯ ಪಡೆದು 75 ವರ್ಷಗಳು ಕಳೆದಿದ್ದು ದೇಶದ ಭವ್ಯ ಸಂಸ್ಕೃತಿ, ಇತಿಹಾಸ ಮತ್ತು ಸಾಧನೆಗಳ ಸಂಭ್ರಮಾಚರಣೆ ಮಾಡುವ ಉದ್ದೇಶದಿಂದ ಸ್ವಾತಂತ್ರö್ಯದ ಅಮೃತ ಮಹೋತ್ಸವವನ್ನು ಕೇಂದ್ರ ಸರ್ಕಾರ ಆರಂಭಿಸಿದೆ.
ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು, ಪಿಯು ಕಾಲೇಜುಗಳ ಮದರಸಾಗಳಲ್ಲಿ ಆ.11 ರಿಂದ 17 ರ ವರೆಗೆ ರಾಷ್ಟç ಧ್ವಜಾರೋಹಣ ಅಭಿಯಾನ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದರ ಅಂಗವಾಗಿ ಪ್ರತಿ ಮನೆಯಲ್ಲೂ ತ್ರಿವರ್ಣಧ್ವಜ ಕಾರ್ಯಕ್ರಮವನ್ನು ರೊಪಿಸಲಾಗಿದ್ದು, ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢ ಶಾಲೆಗಳು ಪದವಿ ಪೂರ್ವ ಕಾಲೇಜುಗಳು ಹಾಗೂ ಮದರಸಾಗಳಲ್ಲಿ ಧ್ವಜಾರೋಹಣ ಅಭಿಯಾನದ ಜೊತೆಗೆ ರಾಷ್ಟçಭಕ್ತಿ ಮೂಡಿಸಲು ಸ್ವಾತಂತ್ರö್ಯದ ತ್ಯಾಗ, ಬಲಿದಾನ ಸ್ಮರತಣೆಯ ಗೀತ ಗಾಯನ, ಕ್ವಿಜ್, ಪ್ರಬಂಧ ಸ್ಪರ್ಧೆ ಮುಂತಾದ ಚಟುವಟಿಕೆ ಆಯೋಜಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಎಂದು ಸಚಿವ ಬಿ.ಸಿ ನಾಗೇಶ ಸೂಚಿಸಿದ್ದಾರೆ.
ಎಲ್ಲ ಬೋಧಕರು ಹಾಗೂ ಭೋಧಕೇತರ ಸಿಬ್ಬಂದಿ ತಮ್ಮ ಮನೆಗಳ ಮೇಲೂ ಧ್ವಜಾರೋಹಣ ಮಾಡುವಂತೆ ತಿಳಿಸಲಾಗಿದೆ.
Leave a Comment