ಹೊನ್ನಾವರ : ತಾಲೂಕು ಕೇಂದ್ರದಲ್ಲಿರುವ ಗ್ರಂಥಾಲಯ ದಲ್ಲಿ ವಿದ್ಯತ್ ಶಾರ್ಟ್ ಸರ್ಕೀಟ್ ನಿಂದ ಬೆಂಕಿ ಕಾಣಿಸಿಕೊಂಡು ಕಂಪ್ಯೂಟರ್ ಸೇರಿದಂತೆ ವಿವಿಧ ಉಪಕರಣಗಳು ಸುಟ್ಟು ಕರಕಲಾಗಿದೆ.

ಬುಧವಾರ ಮಧ್ಯಾಹ್ನದ ಸಮಯದಲ್ಲಿ ಏಕಾಏಕಿ ಗ್ರಂಥಲಾಯದ ಒಳಗಡೆ ದಟ್ಟ ಹೊಗೆ ಕಾಣಿಸಿಕೊಂಡಾಗ ಸಮೀಪದಲ್ಲೇ ಇರುವ ಪ.ಪಂ ಸಿಬ್ಬಂದಿ ಯೋಗೇಶ್ ಅವರು ಸ್ಥಳಕ್ಕೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಬಾಗಿಲು ಮುರಿದು ಒಳಪ್ರವೇಶಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.
2 ಕಂಪ್ಯೂಟರ್, ಕುರ್ಚಿ, ಮೇಜು ಫ್ಯಾನ್ ಹಾಗೂ ಸದಸ್ಯತ್ವದ ಕಾರ್ಡ್ ಸುಟ್ಟು ಕರಕಲಾಗಿದ್ದು, ಪುಸ್ತಕಗಳು ಸುರಕ್ಷಿತವಾಗಿದೆ ಎಂದು ತಿಳಿದಿಬಂದಿದೆ.
Leave a Comment