ಅಂಕೋಲಾ : ಯುವತಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅವರ್ಸಾದಲ್ಲಿ ನಡೆದಿದೆ.
ಶುಕ್ರವಾರ ಬೆಳ್ಳಿಗೆ ಏಕಾಏಕಿ ಬಾವಿಗೆ ಧಮುಕಿದ್ದು, ಆತ್ಯಹತ್ಯಗೆ ನಿಖರವಾದ ಕಾರಣ ತಿಳಿದು ಬರಲಿಲ್ಲ.
ಶೋಭಾ ಆಗೇರ (36) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ, ಪದವಿ ಕಾಲೇಜು ಶಿಕ್ಷಣ ಮುಗಿಸಿ ಮನೆಯಲ್ಲಿ ಇರುತ್ತಿದ್ದ ಈಕೆ, ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ಬಾವಿಯಿಂದ ಮೇಲೆತ್ತಿದರೂ, ಸಾಮಾಜಿಕ ಕಾರ್ಯಕರ್ತೆ ವಿಜಯಕುಮಾರ, ಮೊಮ್ಮಯ್ಯ ನಾಯ್ಕ, ಅನಿಲ ಮಹಾಲೆ ಮೃತದೇಹವನ್ನು ಶವಗಾರಕ್ಕೆ ಸಾಗಿಸಲು ಸಹಕರಿಸಿದರು.
ಪಿಎಸ್ ಐ ಮಾಲಿನಿ ಹಾಸಭಾವಿ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನೀಖೆ ಮುಂದುವರೆದಿದೆ.
Leave a Comment