ಹೊನ್ನಾವರ : ತಾಯಿಯೊಬ್ಬಳು ತನ್ನ ಎರಡೂವರೆ ವರ್ಷದ ಮಗುವಿನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮುಂಜಾನೆ 9:30ಕ್ಕೆ ನಡೆದಿದೆ. ಮೃತರನ್ನು ವನಿತಾ ನಾಯ್ಕ (27) ಹಾಗೂ ಮಗಳು ಮನಸ್ವಿ ಎಂದು ಗುರುತಿಸಲಾಗಿದೆ.
ಮೃತ ವನಿತಾ ಮೂಲತಃ ಚಿಕ್ಕನಕೋಡ್ಡವಳಾಗಿದ್ದು, ಜಲವಳ ಕರ್ಕಿ ಗ್ರಾಮದ ಮಂಜುನಾಥನಿಗೆ ಮದುವೆ ಮಾಡಿಕೊಟ್ಟಿದ್ದರು. ವಿವಾಹ ಆಗಿ ಏಳೂವರೆ ವರ್ಷ ಆಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ದೊಡ್ಡ ಮಗಳು ಆರು ವರ್ಷದವಳನ್ನು ಶಾಲೆಗೆ ಬಿಟ್ಟು ಬಂದ ತಾಯಿ, ತನ್ನೊಂದಿಗೆ ಇದ್ದ ಎರಡೂವರೆ ವರ್ಷದ ಮನಸ್ವಿ ಜೊತೆಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತಳ ಸಹೋದರ ದಯಾನಂದ ನಾಯ್ಕ ಹೊನ್ನಾವರ ಠಾಣೆಗೆ ದೂರು ನೀಡಿದ್ದಾರೆ. ತನ್ನ ತಂಗಿಯ ಗಂಡನಾದ ಮಂಜುನಾಥನು ನನ್ನ ತಂಗಿಯ ಮೇಲೆ ಸಂಶಯ ಮಾಡಿ ಅವಾಚ್ಯ ಶಬ್ದಗಳಿಂದ ಬೈಯುವುದು, ಹೊಡೆಯುವುದು ಮಾಡಿ ಮಾನಸಿಕ ಹಿಂಸೆ ನೀಡುತ್ತಾ ಬಂದಿದ್ದನು. ತನ್ನ ತಂಗಿಗೆ ಮೊಬೈಲ್‌ನಲ್ಲ ಸಹಾ ಮಾತನಾಡಲು ಕೂಡುತ್ತಿರಲಿಲ್ಲ. ಮೊಬೈಲ್‌ನಲ್ಲಿ ಮಾತನಾಡಿದರೂ ತನ್ನ ತಂಗಿಯ ಶೀಲದ ಮೇಲೆ ಸಂಶಯ ಮಾಡುತ್ತಿದ್ದನು. ತನ್ನ ತಂಗಿಗೆ ಎರಡನೇ ಹೆಣ್ಣು ಮಗು ಮನಸ್ವಿ ಹುಟ್ಟಿದ ಮೇಲೆ ಈ ಹೆಣ್ಣು ಮಗು ತನ್ನದಲ್ಲ, ಮತ್ತೆ ಹೆಣ್ಣು ಮಗು ಹುಟ್ಟಿದೆ, ಎಂದು ಮಗುವಿಗೆ ಕರೆದುಕೊಂಡು ಎಲ್ಲಿಗಾದರೂ ಹೋಗಿಯಾದರು ಹೋಗಿ ಬಾವಿಯಲ್ಲಿ ಹಾರಿ ಸಾಯಿರಿ ಎಂದು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡುತ್ತಾ ಬಂದಿದ್ದನು.
ತನ್ನ ತಂಗಿ ನಾದಿನಿಯಂದಿರಾದ ಹೊದಿಕೆಶಿರೂರಿನ ತಾರಾ ಮಂಜುನಾಥ ನಾಯ್ಕ, ನೇತ್ರಾ ಶೇಖರ ನಾಯ್ಕ ಇವರು ಸಹಾ ತನ್ನ ತಂಗಿ ವನಿತಾಳಿಗೆ ಎರಡು ಹೆಣ್ಣು ಮಕ್ಕಳು ಹುಟ್ಟಿದ್ದಾರೆ ಅಂತಾ ಕಿರುಕುಳ ನೀಡುವುದು, ಬೈಯುವುದು ಮಾಡುತ್ತಿದ್ದರು. ಎರಡನೇ ಹೆಣ್ಣು ಮಗು ಹುಟ್ಟಿದ ಬಗ್ಗೆ ಸಂಶಯ ಮಾಡಿ ಹೀಯಾಳಸುತ್ತಿದ್ದರು. ಅವಾಚ್ಯ ಶಬ್ದಗಳಿಂದ ಬೈಯುವುದು, ತನ್ನ ತಂಗಿಗೆ ಬೇರೆ ಕಡೆ ಸಂಬAಧ ಇದೆ ಅಂತಾ ಹೇಳಿ ಸಂಶಯ ಮಾಡಿ ತನ್ನ ತಂಗಿಯ ಮೇಲೆ ವಿನಾಕಾರಣ ಕಿರುಕುಳ ನೀಡುತ್ತಿದ್ದರು.
ಇವರೆಲ್ಲರೂ ಸೇರಿ ನನ್ನ ತಂಗಿಗೆ ಕಿರುಕುಳ ನೀಡಿ, ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಟೇರಣೆ ನೀಡಿದ್ದರಿಂದಲೇ ತನ್ನ ತಂಗಿ ವನಿತಾ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ಕುರಿತಂತೆ ಜಲವಳ್ಳಿ ಕರ್ಕಿಯ ನಿವಾಸಿ ಮೃತಳ ಪತಿ ಆರೋಪಿತರಾದ ಮಂಜುನಾಥ ಈಶ್ವರ ನಾಯ್ಕ, ಮೃತಳ ಅತ್ತೆ ಸಾವಿತ್ರಿ ಈಶ್ವರ ನಾಯ್ಕ, ನಾದಿನಿಯರಾದ ತಾರಾ ಮಂಜುನಾಥ ನಾಯ್ಕ, ನೇತ್ರಾ ಶೇಖರ ನಾಯ್ಕ ಮೇಲೆ ದೂರು ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೃತರ ಶವವನ್ನು ಬಾವಿಯಿಂದ ಮೇಲಕ್ಕೆತ್ತಿದ ಬಳಿಕ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಆಸ್ಪತ್ರೆ ಮುಂದೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಮೃತರ ಸಂಬAಧಿಗಳು ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಿ ಎಂದು ಆಗ್ರಹಿಸಿದ್ದಾರೆ. ನಂತರ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸುನೀಲ್ ನಾಯ್ಕ ಆತ್ಮಹತ್ಯೆಗೆ ಕಾರಣರಾದ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಿ ಎಂದು ಸಿಪಿಐ ಶ್ರೀಧರ್ ಎಸ್.ಆರ್. ಅವರಿಗೆ ಸೂಚಿಸಿದ್ದಾರೆ.
Leave a Comment