ಹೊನ್ನಾವರ : ಸಮುದ್ರದಲ್ಲಿ ಬಲೆ ಬಿಡುವ ಸಂದರ್ಭದಲ್ಲಿ ಮೀನುಗಾರ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಮಂಕಿಯಲ್ಲಿ ಬುಧವಾರ ನಡೆದಿದೆ.
ಗಣಪತಿ ನಾಗಪ್ಪ ಖಾರ್ವಿ ಮೃತಪಟ್ಟವ ಎನ್ನಲಾಗಿದೆ. ಬುಧವಾರ ಬೆಳಿಗ್ಗೆ ತನ್ನ ಸಂಬAಧಿಗಳಾದ ದೇವರಾಜ ಮಂಜುನಾಥ ಖಾರ್ವಿ, ಸಂಜಯ ಈಶ್ವರ ಖಾರ್ವಿ, ಇವರೊಂದಿಗೆ ಜಯ ಶ್ರೀರಾಮ ನಾಡದೋಣಿಯಲ್ಲಿ ಮಂಕಿ ಮಡಿಯಿಂದ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು.
ಗಣಪತಿ ಖಾರ್ವಿ ಹೆಂಡತಿ ಹಾಗೂ ಮೂವರು ಚಿಕ್ಕ ಮಕ್ಕಳನ್ನು ಆಗಲಿದ್ದಾರೆ. ಮಂಕಿ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment