ಹೊನ್ನಾವರ : ತಾಲೂಕಿನ ಮಾಗೋಡ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಅಡ್ಡೆಯ ಮೇಲೆ ಹಣವನ್ನು ಪಂಥವನ್ನಾಗಿ ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರು ದಾಳಿ ನಡೆಸಿ 4470 ನಗದು 8 ಜನರನ್ನು ವಶಕ್ಕೆ ಪಡೆದು ಏಳು ಬೈಕನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನಲ್ಲಿ ಇಸ್ಪೀಟ್ ಜೂಜಾಟ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದ್ದು ಆಗಾಗ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮಾಗೋಡ ಬಳಿ ಇದೀಗ ಪಿಎಸೈ ಮಹಾಂತೇಶ ನಾಯಕ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿದ್ದು, ದಾಳಿ ವೇಳೆ 4470 ನಗದು ಹಾಗೂ 7 ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ
ಜೂಜಾಟದಲ್ಲಿ ತೊಡಗಿದ್ದ ಮಾಗೋಡ ಗ್ರಾಮದ ಶೇಖರ ನಾಯ್ಕ, ಸಂದೇಶ ನಾಯ್ಕ, ದಾಮೋದರ ನಾಯ್ಕ, ಸಂದೇಶ ನಾಯ್ಕ, ಮಹೇಶ ನಾಯ್ಕ, ರಾಜು ನಾಯ್ಕ, ಆನಂದ ನಯ್ಕ, ಮಹದೇವ ನಾಯ್ಕ ಅವರನ್ನು ವಶಕ್ಕೆ ಪಡೆದಿದ್ದು, ದತ್ತಾತ್ರೇಯ ನಾಯ್ಕ, ರಮೇಶ ನಾಯ್ಕ, ಮನೋಜ ನಾಯ್ಕ, ಪುರದಂರ ನಾಯ್ಕ ಇವರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ.
ಈ ಸಂಬAಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment