ಕಾರವಾರ: ತಾಲೂಕಿನ ಮಾಜಾಳಿ ಬಳಿ ಸವಾರನ ನಿಯಂತ್ರಣ ತಪ್ಪಿದ ಬೈಕ್ ಪಲ್ಟಿಯಾದ ಪರಿಣಾಮ ಹಿಂಬದಿ ಕುಳಿತಿದ್ದ ಸವಾರನ ಪತ್ನಿ ಮೃತಪಟ್ಟಿದ್ದಾಳೆ.
ತಾಲೂಕಿನ ಕಣಸಗಿರಿ ನಿವಾಸಿ ವರ್ಷಾ ವಸಂತ ನಾಯ್ಕ (33) ಮೃತಪಟ್ಟ ಮಹಿಳೆ. ಇವರು ತನ್ನ ನಾಲ್ಕು ವರ್ಷದ ಪುತ್ರಿಯ ಜೊತೆಗೆ ಪತಿಯ ಬೈಕ್‌ನಲ್ಲಿ ಗೋವಾ ಕಡೆಗೆ ಸಾಗುತ್ತಿದ್ದಾಗ ಸವಾರನ ನಿಯಂತ್ರಣ ತಪ್ಪಿದ ಪರಿಣಾಮ ಬೈಕ್ ಸ್ಕಿಡ್ ಆಗಿದೆ.
ಅಪಘಾತದ ರಭಸಕ್ಕೆ ವರ್ಷಾ ಅವರ ತಲೆ ಭಾಗಕ್ಕೆ ತೀವ್ರ ಪೆಟ್ಟು ತಗಲಿದೆ. ಇವಳ ಪತಿಗೂ ಗಾಯಗಳಾಗಿವೆ. ಆದರೆ ಪುತ್ರಿಗೆ ಮಾತ್ರ ಯಾವುದೇ ಅಪಾಯವಾಗಿಲ್ಲ. ಗಾಯಗೊಂಡ ಪತಿ, ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಬಾಂಬೋಲಿ ಆಸ್ಪತ್ರೆಯಲ್ಲಿ ವರ್ಷಾ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವರ್ಷಾ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಬೈಕ್ ಸವಾರನ ಮೇಲೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
Leave a Comment