• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪರ್ಯಾಯ ಗ್ರೀನ್ ಸಿಮೆಂಟ್ !

August 1, 2022 by Deepika Leave a Comment

ಕಾರವಾರ: ಕಟ್ಟಡ ನಿರ್ಮಾಣಕ್ಕೆ ಬಳಸುವ ಸಿಮೆಂಟ್‌ಗೆ ಪರ್ಯಾಯವಾಗಿ ಗ್ರೀನ್ ಸಿಮೆಂಟ್ ಆನ್ವೇಷಣೆ ಮಾಡಿರುವ ಕಾರವಾರದಸರ್ಕಾರಿ ಎಂಜಿನಿಯರಿAಗ್‌ಕಾಲೇಜುವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಎಕ್ಸಿಬಿಶನ್‌ನಲ್ಲಿ ಪ್ರಥಮ ಬಹುಮಾನ ದೊರೆತಿದೆ.

ತಾಲೂಕಿನ ಮಾಜಾಳ ಸರ್ಕಾರಿ ಎಂಜಿನಿಯರಿAಗ್ ಕಾಲೇಜಿನ ಸಿವಿಲ್ ಎಂಜಿನಿಯರಿAಗ್ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಪೃಥ್ವಿರಾಜ್ ಜೈನ್, ಕಾರ್ತಿಕ್ ಸ್ಟಾಮಿ, ದರ್ಶನ್ ಜೈನ್, ಅಮೂಲ್ಯ ಅವರು ಉಪನ್ಯಾಸಕ ಮಿಥೇಶಕುಮಾರ್ ಅವರ ಮಾರ್ಗದರ್ಶನದಲ್ಲಿ ಸತತ ಅಧ್ಯಯನ ನಡೆಸಿ ಸಿಮೆಂಟ್‌ಗೆ ಪರ್ಯಾಯವಾಗಿ ಗಿನ್ ಸಿಮೆಂಟ್ ಕಂಡುಹಿಡಿದಿದ್ದಾರೆ. ಈ ಗೀನ್ ಸಿಮೆಂಟ್‌ನಿAದ ತಯಾರಿಸಿದ ಪೇವರ್ ಬ್ಲಾಕ್‌ಗಳನ್ನು ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ರಾಜ್ಯ ಮಟ್ಟದ ಎಂಜಿನಿಯರಿAಗ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಎಕ್ಸಿಬಿಶನ್‌ನಲ್ಲಿ ಪ್ರಸ್ತುತಪಡಿಸಿದ್ದಾರೆ. 110 ಕಾಲೇಜುಗಳಿ0ದ 8 ಸೆಕ್ಟರ್‌ಗಳಲ್ಲಿ ಪ್ರದರ್ಶಿಸಲ್ಪಟ್ಟ 280 ಪ್ರಾಜೆಕ್ಟ್ಗಳ ಪೈಕಿ ಸಿವಿಲ್ ಎಂಜಿನಿಯರಿAಗ್ ಪ್ರಾಜೆಕ್ಟ್ನಲ್ಲಿ ಕಾರವಾರದ ವಿದ್ಯಾರ್ಥಿಗಳ ಗೀನ್ ಸಿಮೆಂಟ್ ಪ್ರಾಜೆಕ್ಟ್ ಪ್ರಥಮ ಬಹುಮಾನ ಗಳಿಸಿಕೊಂಡಿದೆ.

ಇAಡಸ್ಟ್ರಿಯಲ್ ವೇಸ್ಟ್ಗಳಾದ ಥರ್ಮಲ್ ಪವರ್ ಪ್ಲಾಂಟ್ನ ವೇಸ್ಟ್, ಮೆಟಿರಿಯಲ್ ಪ್ಲೆಟ್ ಮತ್ತು ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ಹೊರಬರುವ ವೇಸ್ಟ್ ಮೆಟಿರಿಯಲ್ ಜಿಜೆಬಿಎಸ್ ಅನ್ನು ಬಳಸಿಕೊಂಡು ಸಿಮೆಂಟ್‌ಗೆ ಪಾರ್ಯಾಯವಾಗಿ ಅನ್ವೇಷಿಸಲಾಗಿದೆ. ಪ್ರಸ್ತುತ ನಿರ್ಮಾಣ ಕಾಮಗಾರಿಗಳಿಗೆ, ಸಿಮೆಂಟ್ ಬ್ಲಾಕ್ ಅಥವಾ ಕಾಂಕ್ರೀಟ್ ಬ್ಲಾಕ್‌ಗಳ ನಿರ್ಮಾಣ ಕಾಮಗಾರಿಗಳಲ್ಲಿ ಸಿಮೆಂಟ್ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಆದರೆ ಈ ಸಿಮೆಂಟ್ ಉತ್ಪಾದನೆಯ ವೇಳೆ ಪರಿಸರಕ್ಕೆ ಹಾನಿಕಾರಕವಾಗಿರುವ ಡೈಆಕ್ಸೆಡ್ ಹೆಚ್ಚಾಗಿ ಬಿಡುಗಡೆಯಾಗುತ್ತಿದ್ದು, ಇದು ಮುಂಬರುವ ಪೀಳಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ಅನ್ವೇಷಣೆ ಮಾಡಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಕಾರವಾರ ಇಂಡಸ್ಟ್ರಿಯಲ್ ವೇಸ್ಟ್ಗಳನ್ನು ಕೃಷಿ ಭೂಮಿಯಲ್ಲಿ ವಿಲೇವಾರಿ ಮಾಡುತ್ತಿದ್ದು, ಇದರಿಂದಾಗಿ ಕೃಷಿ ಕ್ಷೇತ್ರದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಆದರೆ ಅದೇ ನಿರುಪಯುಕ್ತ ವಸ್ತುಗಳನ್ನು ನಾವು ಕಾಂಕ್ರೀಟ್‌ನAತೆಯೂ ಬಳಸಬಹುದಾಗಿದೆ. ಇದರಿಂದ ಪರಿಸರಕ್ಕೂ ಹಾನಿ ಇಲ್ಲ ಎನ್ನುತ್ತಾರೆ ಈ ಪ್ರಾಜೆಕ್ಟ್ ಸಿದ್ಧಪಡಿಸಿರೋ ವಿದ್ಯಾರ್ಥಿ ಕಾರ್ತಿಕ್ ಸ್ವಾಮಿ.

ಈಗಾಗಲೇ ಈ ಬಗ್ಗೆ ಬಿಬಿಎಂಪಿ ಕೂಡ ಆಸಕ್ತಿ ವಹಿಸಿ ಪ್ರಾಜೆಕ್ಟ್ ವರದಿ ಪಡೆದಿದೆ. ಮುಂದಿನ ದಿನಗಳಲ್ಲಿ ಪರಿಸರಕ್ಕೆ ಹಾನಿಕಾರಕವಾದ ಸಿಮೆಂಟ್‌ಗೆ ಪರ್ಯಾಯವಾಗಿ ಈ ಗಿನ್ ಸಿಮೆಂಟ್‌ಗಳ ಉತ್ಪಾದನೆ ಹೆಚ್ಚಾದಲ್ಲಿ ಮುಂದಿನ ಪೀಳಿಗೆಗೂ ಅನುಕೂಲವಾಗಿದೆ.

ಗ್ರೀನ್ ಸಿಮೆಂಟ್ ಅನ್ವೇಷಿಸಿದ ಕಾರವಾರ ಸರ್ಕಾರಿ ಎಂಜಿನಿಯರಿAಗ್ ಕಾಲೇಜು ವಿದ್ಯಾರ್ಥಿಗಳು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Karwar News

Explore More:

About Deepika

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,118 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar