ಕಾರವಾರ : ಶಿರಿಸಿಯಿಂದ ಕಾರವಾರಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮಾಲು ಸಮೇತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿಶೇಷ ತಂಡ ವಶಕ್ಕೆ ಪಡೆದಿದೆ.

ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಗರದ ಲಂಡನ್ ಬ್ರಿಡ್ಜ್ ಬಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿಶೇಷ ತಂಡದ ಪಿಎಸ್ಐ ಪ್ರೇಮನಗೌಡ ಪಾಟೀಲ್ ಅವರ ನೇತೃತ್ವದ ತಂಡ ಕಾರು ತಡೆದು ಪರಿಶೀಲಿಸಿದಾಗ ಕಾರಿನಲ್ಲಿ 50 ಸಾವಿರ ರೂ. ಮೌಲ್ಯದ 1 ಕೆಜಿ 992 ಗ್ರಾಂ ಒಣಗಿದ ಗಾಂಜಾ ಪತ್ತೆಯಾಗಿದೆ.
ತಕ್ಷಣವೇ ಆರೋಪಿತರಾದ ದಾಂಡೇಲಿಯ ಜಂಗಲ್ ರೆಸಿಡೆನ್ಸಿಯ ಮಾಲೀಕ ಅಂಜನಿಕುಮಾರ, ಜಂಗಲ್ ನೈಟ್ ಹೋಂ ಸ್ಟೇ ಮಾಲೀಕ ಪವನಕುಮಾರ ಕೊನ್ನೂರು, ದಾಂಡೇಲಿಯ ನಿವಾಸಿ ಯೋಗೇಶ ರಜಪೂತ್, ಚಾಲಕ ಬಸಯ್ಯಾ ದೆಗಲೊಳ್ಳಿಮಠ ಅವರನ್ನು ಬಂಧಿಸಲಾಗಿದ್ದು, ಕಾರು ಜಪ್ತಿಪಡಿಸಿಕೊಳ್ಳಲಾಗಿದೆ.
ಕೃತ್ಯದಲ್ಲಿ ಭಾಗಿಯಾಗಿರುವ ಅಂಜನಿಕುಮಾರ್ ಮತ್ತು ಪವನಕುಮಾರ ಮತ್ತು ಹೋಸ್ಟೇಗಳ ಮಾಲೀಕರಾಗಿರುವ ಕಾರಣ, ಅವರ ಹೋಂಸ್ಟೇಗಳ ಪರವಾನಗಿಯನ್ನು ರದ್ದು ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಡಿವೈಎಸ್ಪಿ ವ್ಯಾಲಂಟೈನ್ ಡಿಸೋಜಾ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಪ್ರೇಮನಗೌಡ ಪಾಟೀಲ, ಪೊಲೀಸ್ ಸಿಬ್ಬಂದಿ ಹನುಮಂತ ರಡ್ಡೇರ್, ಸಂತೋಷ, ಭಗವಾನ್ ಗಾಂವ್ಕರ, ವೀರೇಶ ನಾಯ್ಕ ಪಾಲ್ಗೋಂಡಿದ್ದರು.
Leave a Comment