ಕಾರವಾರ :
ಭಾರತೀಯ ಸೇನೆ/ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅರ್ಹ ಅಭ್ಯಥಿಗಳಿಗೆ ಪೂರ್ವ ಸಿದ್ಧೆತೆಗಾಗಿ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿ ನೀಡಲು ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಆ.16 ರವರೆಗೆ ವಿಸ್ತರಿಸಲಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳ ಕಛೇರಿಗೆ ಖುದ್ದಾಗಿ ಭೇಟಿ ನೀಡಿ ಅಥವಾ ನೊಂದಾಯಿತ ಅಂಚೆ ಮೂಲಕ ನಿಗದಿತ ಅವಧಿಯೊಳಗೆ ತಲುಪುವಂತೆ ರವಾನಿಸಬೇಕು. ಇಲಾಖೆಯ ವೆಬ್ ಸೈಟ್ : ನ್ನು ಸಂಪರ್ಕಿಸಿ ಅರ್ಜಿ ನಮೂನೆ ಹಾಗೂ ಅಧಿಸೂಚನೆಯನ್ನು ಪಡೆಯಬಹುದು.
web site ; www.bcwd.karnataka.gov.in
ಹೆಚ್ಚಿನ ಮಾಹಿತಿಗಾಗಿ ಕಾರವಾರ ಕಚೇರಿ ದೂರವಾಣಿ ಸಂಖ್ಯೆ 08382 – 226589 ಗೆ ಅಥವಾ [email protected] & Kar.gov.in ನ್ನು ಸಂಪರ್ಕಿಸಬಹುದಾಗಿದೆ. ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಿ. ಸತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment