ಅಂಕೋಲಾ : ಗ್ರಾಮೀಣ ಭಾಗದ ಯುವತಿ ಯೋರ್ವಳು ತನ್ನ ಮನೆಯ ಹೊರ ಭಾಗದಲ್ಲಿರುವ ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ, ಇಣುಕಿ ನೋಡಿದ್ದಲ್ಲದೇ ಮೊಬೈಲ್ ನಲ್ಲಿ ವಿಡಿಯೋ ಮಾಡಲು ಮುಂದಾದ ಓರ್ವ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆಸಿದೆ.
ಮಾರುತಿ ಬಿ ನಾಯ್ಕ (34) ಎಂಬಾತನೇ ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ ವ್ಯಕ್ತಿ. ಈ ಕುರಿತು ನೊಂದ ಯುವತಿಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಯುವತಿ ಸ್ನಾನ ಮಾಡುವ ವಿಡಿಯೋ ಚಿತ್ರೀಕರಣ ಮಾಡಲು ಹೋದ ವ್ಯಕ್ತಿ ಸ್ತಿçÃಯ ಮಾನಕ್ಕೆ ಕಂದು ತರುವ ಕೃತ್ಯ ಎಸಗಿದ ಪ್ರಕರಣ ದಡಿ ಆರೋಪ ಎದುರಿಸುವಂತೆ ಆಗಿದೆ.
Leave a Comment