ಕಾರವಾರ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕರವು ಜನತೆಗೆ ದೇಶದಾದ್ಯಂತ ಗುಣಮಟ್ಟದ ಆಹಾರವು ದೊರಕಬೇಕೆಂಬ ಉದ್ದೇಶವನ್ನು ಹೊಂದಿದೆ. ಬೇರೆ ಬೇರೆ ಕಡೆಗಳಲ್ಲಿ ಕಲಬೆರಕೆ ಅಡುಗೆ ಎಣ್ಣೆ ಹಾಗೂ ಅಗ್ಮಾರ್ಕ್ ಲೈಸನ್ಸ್ ಪಡೇಯದೇ ಮಿಶ್ರಣ ಎಣ್ಣೆ (Blended Oil) ಗಳನ್ನು ಮಾರಾಟ ಮಾಡಲಾಗುತ್ತಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ರೆಗ್ಯೂಲೇಷನ್ ರಂತೆ ಅಲ್ಲಲ್ಲಿ ಕೆಲವೊಂದು ಪ್ರಕರಣಗಳು ಕೂಡ ದಾಖಲಾಗಿದ್ದು, ತ್ರೈಮಾಸಿಕ ಸರ್ವೇಕ್ಷಣಾ ಹಾಗೂ ಜಾರಿ ಆಂದೋಲನ ವರದಿಗಳನ್ನು ಪರಿಶೀಲಿಸಿದಾಗ ಅಡುಗೆ ಎಣ್ಣೆಯು ಅತಿಹೆಚ್ಚು ಕಲಬೆರಕೆ ಮತ್ತು ಪ್ಯಾ ಕೆಟ್ ಮೇಲೆ ಲೇಬಲ್ಗಳನ್ನು ಸರಿಯಾಗಿ ಹಾಕದೆ ಇರುವುದು ಕಂಡುಬಂದಿದ್ದು, ದೇಶದಾದ್ಯಂತ ಆ. 1 ರಿಂದ 14 ರವರೆಗೆ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕರವು ಅಡುಗೆ ಎಣ್ಣೆಯಲ್ಲಿ ಕಲಬೆರಕೆ, ಎಣ್ಣೆಯಲ್ಲಿ ಟ್ರಾನ್ಸಫ್ಯಾಟಿ ಆ್ಯಸಿಡ್ ಅಂಶ, ಸರಿಯಾದ ಲೇಬಲ್ ಮಾಡದೇ ಇರುವುದು, ಅಗ್ ಮಾರ್ಕ ಲೈಸನ್ಸ್ಯಿರದೇ ಇರುವ ಮಲ್ಟಿಸೋರ್ಸ ಅಡುಗೆ ಎಣ್ಣೆ ಮತ್ತು ಪ್ಯಾಕೆಟ್ ಮಾಡದೇ ಮಾರಾಟ ಮಾಡುವವರನ್ನು ಪತ್ತೆಹಚ್ಚುವ ಕೆಲಸವನ್ನು ಮಾಡಲಾಗುತ್ತಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಆಹಾರ ಕಲಬೆರೆಕೆ ಪತ್ತೆಹಚ್ಚುವ ತಂಡವನ್ನು ರಚಿಸಲಾಗಿದ್ದು, ಆ. 2 ರಿಂದ 14 ರವರೆಗೆ ಜಿಲ್ಲೆಯಾದ್ಯಂತ ಬೇರೆ ಬೇರೆ ಅಂಗಡಿಗಳಿಗೆ ಭೇಟಿಕೊಟ್ಟು ಅಡುಗೆ ಎಣ್ಣೆ ಆಹಾರ ಮಾದರಿಯನ್ನು ತೆಗೆದು ವಿಶ್ಲೇಷಣೆಗೆ ಕಳುಹಿಸಲಾಗುವುದು ಹಾಗೂ ಈಗಾಗಲೇ ನಿಷೇಧವಾಗಿರುವ ಪ್ಯಾಕೇಟ್ ಇಲ್ಲದೆ ಮಾರಾಟ ಮಾಡುವವರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಕಾನೂನು ಕ್ರಮಕೈಗೊಳ್ಳಲಾ ಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment