ಶಿರಸಿ : ಶಿವಮೊಗ್ಗ ನಗರದ ಸಂಸ್ಕೃತ ಭಾರತಿ ಹಾಗೂ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ವತಿಯಿಂದ ಸೆ. 9 ರ ಭಾನುವಾರ ಬೆಳಿಗ್ಗೆ 9.30 ಗಂಟೆಯ ಸಂಸ್ಕೃತ ವಿದ್ಯಾರ್ಥಿಗಳಿಗೆ ರಾಜನೀತಿಯಲ್ಲಿ ಸುಭಾಷಿತಗಳ ಯೋಗದಾನ ಎಂಬ ವಿಷಯದ ಬಗ್ಗೆ ಕರ್ನಾಟಕ ರಾಜ್ಯಸ್ತರದ 32 ನೇ ಸಂಸ್ಕೃತ ಭಾಷಣ ಸ್ಪರ್ಧೆ ಯನ್ನು ಶಿವಮೊಗ್ಗ ನಗರದ ಸಂಸ್ಕೃತ ಭವನದಲ್ಲಿ ಏರ್ಪಡಿಸಲಾಗಿದೆ.
ಸಂಸ್ಕೃತ ಭಾಷೆಯಲ್ಲೇ ಭಾಷಣ ಮಾಡಬೇಕು, 18 ವರ್ಷದಿಂದ 25 ವರ್ಷದ ಬಳಗಿನವರೆಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಭಾಷಣದ ಅವಧಿ 6 ನಿಮಿಷಗಳು ಮಾತ್ರ, ಸ್ಪರ್ಧಿಗಳು ಭಾಷಣದ ನಂತರ ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಆಶುಭಾಷಣದ ಅವಧಿ 2 ನಿಮಿಷಗಳು. ಸ್ಪರ್ಧೆಗೆ ಹೆಸರು ನೋಂದಾಯಿಸಲು ಕಡೆಯ ದಿನಾಂಕ ಆ. 25 ಹೊರ ಊರಿನಿಂದ ಬಂದ ಸ್ಪರ್ಧಿಗಳಿಗೆ ಒಂದು ಮಾರ್ಗದ ಬಸ್ ಪ್ರಯಾಣದ ಕನಿಷ್ಠ ವೆಚ್ಚದ ದರವನ್ನು ಕೊಡಲಾಗುವುದು ಸ್ಪರ್ದೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.
ಸ್ಪರ್ದೆಯಲ್ಲಿ ಭಾಗವಹಿಸುದ ವಿದ್ಯಾಥೀಗಳು ಕಾಲೇಜಿನ/ಪಾಠ ಶಾಲೆಯ ವತಿಯಿಂದ ಅಧಿಕೃತ ಪತ್ರದೊಂದಿಗೆ ಆ, 25 ರ ಬಳಗಾಗಿ ಪ್ರಧಾನ ಕಾರ್ತದರ್ಶಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಸಂಸ್ಕೃತ ಭವನ, ಶ್ರೀ ಲಕ್ಷಿö್ಮÃನಾರಾಯಣ ದೇವಾಲಯ ಮಾರ್ಗ : (ಬಿ.ಬಿ. ರಸ್ತೆ), ಶಿವಮೊಗ್ಗ, ದೂರವಾಣಿ : 9448790127, ಇಲ್ಲಿ ಕಳುಹಿಸಿಕೊಡುವಂತೆ ಸಂಸ್ಕೃತ ಭಾರತೀ ಶಿವಮೊಗ್ಗ ಜಿಲ್ಲಾ ಸಂಯೋಜಕ ಟಿ.ವಿ. ನರಸಿಂಹಮೂರ್ತಿ ತಿಳಿಸಿದ್ದಾರೆ.
Leave a Comment