ಶಿರಸಿ : ಕರಡಿ ದಾಳಿಗೆ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವು ಕಂಡ ಘಟನೆ ತಾಲೂಕಿನ ದೇವನಹಳ್ಳಿಯಲ್ಲಿ ನಡೆದಿದೆ.
ಓಂಕಾರ ಜೈನ್ (52) ಕರಡಿ ದಾಳಿಗೆ ಮೃತಪಟ್ಟಿರುವ ವ್ಯಕ್ತಿಯಾಗಿದ್ದು, ಕಾಡಿಗೆ ತೆರಳಿದ್ದಾಗ ಏಕಾ ಏಕಿ ಕರಡಿ ದಾಳಿ ನಡೆಸಿದೆ.
ಈ ವೇಳೆ ಮರವನ್ನು ಹತ್ತಲು ಆತ ಪ್ರಯತ್ನ ಪಟ್ಟರೂ ಕರಡಿ ತಲೆ ಭಾಗವನ್ನೆ ಕಿತ್ತು ಹರಿದು ಹಾಕಿದ್ದು ತೀವ್ರ ರಕ್ತ ಸ್ರಾವದಿಂದ ವ್ಯಕ್ತಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment