ಹೊನ್ನಾವರ: ಪಟ್ಟಣದ ಉದ್ಯಮಿ ಪುರುಷೋತ್ತಮ ಪ್ರಭು ಎಂಬುವವರಿಗೆ ಹೆದರಿಸಿ 50 ಲಕ್ಷ ರೂಪಾಯಿ ಹಣ ಕೊಡುವಂತೆ ತಮ್ಮ ಗುರುತನ್ನು ಮರೆಮಾಚಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಗಳನ್ನು ಹೊನ್ನಾವರ ಪೊಲೀಸರು ಮಂಗಳವಾರ ಪತ್ತೆ ಹಚ್ಚಿ ದಸ್ತಗಿರಿ ಮಾಡಿಕೊಂಡಿದ್ದಾರೆ.
ತಾಲೂಕಿನ ಕರ್ಕಿಕೋಡಿಯ ನಿವಾಸಿ ಪರಮೇಶ್ವರ ಮುಕುಂದ ಉಪ್ಪಾರ, ಹಾಗೂ ಪಟ್ಟಣದ ಉದ್ಯಮನಗರದ
ಸುನೀಲ್ ಬಾಬು ಮೇಸ್ತಾ ಎಂದು ಗುರುತಿಸಲಾಗಿದೆ.
ಇರ್ವರು ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದರು. ಹೊನ್ನಾವರ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರ ತಂಡ ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದು, ಆರೋಪಿತರಿಂದ 1ಕಾರು 1 ಸ್ಕೂಟಿ,3ಮೊಬೈಲ್ ಪೋನ್ ಸೇರಿದಂತೆ ಕೃತ್ಯಕ್ಕೆ ಬಳಸಿದ ಇತರೇ ಸಾಮಗ್ರಿಗಳನ್ನು ಜಪ್ತು ಪಡಿಸಿಕೊಂಡಿದ್ದಾರೆ.
ದಸ್ತಗಿರಿಯಾದ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Leave a Comment