ಹೊನ್ನಾವರ: ತಾಲೂಕಿನ ಹಳದೀಪುರದ ರಾಷ್ಟ್ರೀಯ ಹೆದ್ದಾರಿ 66ರ ಚಿಪ್ಪಿಹಕ್ಕಲ್ ತಿರುವಿನಲ್ಲಿ ಅಕ್ಕಿ ಸಾಗಾಟದ ಲಾರಿಗೆ ಚಿರೇಕಲ್ಲು ಸಾಗಿಸುತ್ತಿದ್ದ ವಾಹನ ಡಿಕ್ಕಿಯಾಗಿ ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.
ಲಾರಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತ ರಭಸಕ್ಕೆ ಅಕ್ಕಿ ತುಂಬಿದ ಲಾರಿ ಪಲ್ಟಿಯಾಗಿ, ಹೆದ್ದಾರಿಯಲ್ಲಿ ಅಕ್ಕಿಮೂಟೆ ಚೆಲ್ಲಾಪಿಲ್ಲಿಯಾಗಿದೆ.
ಕಲ್ಲು ತುಂಬಿದ ವಾಹನದಲ್ಲಿದ್ದ ಕೂಲಿಕಾರ್ಮಿಕರು ವಾಹನದಲ್ಲಿ ಸಿಲುಕಿದ್ದು, ಓರ್ವ ಮೃತಪಟ್ಟಿದ್ದಾನೆ. ಮೃತಪಟ್ಟ ವ್ಯಕ್ತಿ ಕುಮಟಾ ತಾಲೂಕಿನ ಊರು ಕೇರಿಯ ಬಿಳಿಯ ಶುಕ್ರು ಗೌಡ ಗುರುತಿಸಲಾಗಿದೆ.
ವಾಹನದಲ್ಲಿದ್ದ ಎಂದು ಲಕ್ಷ್ಮಣ ಮಡಿವಾಳ, ರಾಮಕೃಷ್ಣ ಮಡಿವಾಳ, ನಾಗೇಶ್ ಪಟಗಾರ ಗಂಭೀರ ಗಾಯಗೊಂಡಿದ್ದು, ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಇನ್ನೊಂದು ಲಾರಿಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment