ಹೊನ್ನಾವರ : ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ ಕುರಿತು ಸಂತ್ರಸ್ತ ಅಪ್ರಾಪ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಗೇರುಸೋಪ್ಪಾ ದೇವಿಗದ್ದೆ ನಿವಾಸಿಯ 21 ವರ್ಷದ ಯುವಕನ ಮೇಲೆ ದೂರು ದಾಖಲಾಗಿದೆ. ಅಪ್ರಾತ್ತೆಯನ್ನು ಪ್ರೀತಿಸಿ ಕಳೆದ ನಾಲ್ಕು ತಿಂಗಳಿAದ ಮನೆಯಲ್ಲೇ ಇರಿಸಿಕೊಂಡು ಮದುವೆಯಾಗುವುದಾಗಿ ಪುಸಲಾಯಿಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳಸಿದ್ದ ಎನ್ನಲಾಗಿದೆ.
ಇದೀಗ ಮತ್ತೋಂದು ಯುವತಿಯ ಜೊತೆ ಸುತ್ತಾಡುತ್ತಿದ್ದು, ಈ ವಿಚಾರ ಸಂತ್ರಸ್ತಳ ಗಮನಕ್ಕೆ ಬಂದಿತ್ತು. ತನಗೆ ಮೋಸ ಮಾಡಿದ್ದಾನೆ ಎಂದು ಸಂತ್ರಸ್ತ ಅಪ್ರಾಪ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.
Leave a Comment