ನವದೆಹಲಿ: ದೇಶದ ಬೃಹತ್ ವಿಮಾ ಕಂಪನಿ ಎಲ್ ಐಸಿ, ಕಂತು ಕಟ್ಟದೇ ನಿಷ್ಕ್ರಿಯ ವಾಗಿರುವ ಪಾಲಿಸಿಗಳಿಗೆ ಮತ್ತೆ ಜೀವ ನೀಡಲ ಅಭಿಯಾನ ಆರಂಭಿಸಿದೆ.
ಆ.17ರಿಂದ ಅ.21 ಈ ಅಭಿಯಾನ ನಡೆಯಲಿದೆ. ಹೆಚ್ಚುವರಿ ಭದ್ರತೆ ನೀಡುವ ಯುಲಿಪ್ ಪಾಲಿಸಿಗಳನ್ನು ಹೊರತುಪಡಿಸಿ, ಉಳಿದೆಲ್ಲ ರೀತಿಯ ವಿಮೆಗಳನ್ನು ಮತ್ತೆ ಸಕ್ರಿಯಗೊಳಿಸಲು ಅವಕಾಶವಿದೆ.
ಅನಿವಾರ್ಯ ಕಾರಣಗಳಿಂದ ವಿಮಾಕಂತನ್ನು ಕಟ್ಟಲು ಸಾಧ್ಯವಾಗದೇ, ನಿಷ್ಕ್ರಿಯವಾಗಿದ್ದರೆ ಅದನ್ನು ಸಕ್ರಿಯಗೊಳಿಸಲು ಕೆಲವು ವಿನಾಯಿತಿಗಳನ್ನು ಎಲ್ ಐಸಿ ಘೋಷಿಸಿದೆ.
ಮೊದಲ ಬಾರಿಗೆ ನೀವು ಕಂತು ಕಟ್ಟದ ದಿನಾಂಕದಿಂದ ಇಲ್ಲಿಯವರೆಗಿನ ಅವಧಿ ಐದು ವರ್ಷದೊಳಗಿದ್ದರೆ, ಆ ಕಂತುಗಳನ್ನು ನೀವು ಮರುಪಾವತಿ ಮಾಡಲು ಅವಕಾಶವಿದೆ.
ಒಂದು ಲಕ್ಷದವರೆಗಿನ ಒಟ್ಟು ಸ್ವೀಕಾರಾರ್ಹ ಪ್ರೀಮಿಯಂಗೆ ಗರಿಷ್ಠ 2,500 ರೂ., 1ರಿಂದ 3 ಲಕ್ಷದ ವರೆಗಿನ ಒಟ್ಟು ಸ್ವೀಕಾರಾರ್ಹ ಪ್ರೀಮಿಯಂಗೆ 3,000 ರೂ., 3 ಲಕ್ಷಕ್ಕಿಂತ ಅಧಿಕ ಒಟ್ಟು ಸ್ವೀಕಾರಾರ್ಹ ಪ್ರೀಮಿಯಂಗೆ 3,500 ರೂ. ಮಿತಿಯೊಂದಿಗೆ ರಿಯಾಯಿತಿ ನೀಡಲಾಗುತ್ತದೆ.
Leave a Comment