ಭಟ್ಕಳ: ತಾಲ್ಲೂಕಿನ ಆಜಾದ್ ನಗರದಲ್ಲಿ ನಿನ್ನೆ ರಾತ್ರಿ ಎಂಟು ವರ್ಷದ ಬಾಲಕನನ್ನು ಅಪಹರಿದ ಘಟನೆ ನಡೆದಿದೆ.
ಅಪಹರನಕ್ಕೆ ಒಳಗಾದ ಬಾಲಕನನ್ನು ಅಲಿ ಸಾದಾ ತಂದೆ ಇಸ್ಲಾಂ ಸಾದಾ 8 ವರ್ಷ ಅಂಗಡಿಯಿಂದ ಬ್ರೆಡ್ ತರಲು ಹೋಗಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಅಕ್ಕಪಕ್ಕದ ಮನೆಗಳ ಅವರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ರಾತ್ರಿ 8 ಗಂಟೆ ಸುಮಾರಿಗೆ ಮಾರುತಿ ಇಕೋ ವ್ಯಾನ್ ಬರುತ್ತಿರುವುದು ಕಂಡು ಬಂದಿದ್ದು, ಅದರಲ್ಲಿದ್ದ ವ್ಯಕ್ತಿಯೊಬ್ಬರು ಇಳಿದು ಬಾಲಕನನ್ನು ಎತ್ತಿಕೊಂಡು ಕಾರಿನಲ್ಲಿ ಹಾಕಿದ್ದು, ಬಳಿಕ ವಾಹನ ಪರಾರಿಯಾಗಿದೆ.
ಆಜಾದ್ ನಗರ ಮೊದಲ ಕ್ರಾಸ್ ಜಾಲಿ ರಸ್ತೆ ಕಡೆಗೆ ಹೋಗುತ್ತಿರುವ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಗರದಾದ್ಯಂತ ಆತಂಕದ ಅಲೆ ಹಬ್ಬಿದೆ.
ಪೊಲೀಸರಿಗೆ ಮಾಹಿತಿ ಲಭಿಸಿದ ಕೂಡಲೇ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ನಗರದ ವಿವಿಧೆಡೆ ಪೊಲೀಸರನ್ನು ನಿಯೋಜಿಸಿ ತನಿಖೆ ನಡೆಸಲಾಗುತ್ತಿದೆ.
ಸಂಜೆಯಿಂದ ಇದೇ ಪ್ರದೇಶದಲ್ಲಿ ವಾಹನ ಸುತ್ತುತ್ತಿರುವುದು ಕಂಡು ಬಂದಿದ್ದು ಅಪಹರಣದ ವೇಳೆ ವ್ಯಾನ್ ಹಿಂದೆ ದ್ವಿಚಕ್ರ ವಾಹನವೂ ಕಾಣಿಸಿಕೊಂಡಿದೆ.
ಪೊಲೀಸರು ಇತರ ಮನೆಗಳ ಹೊರಗಿನ ಸಿಸಿಟಿವಿ ದೃಶ್ಯಗಳನ್ನು ಸಹ ಪಡೆದುಕೊಂಡಿದ್ದು, ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ.
Leave a Comment