ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಸ್.ಸಿ.ಎಸ್. ಸಿ.ಟಿ. ಎಸ್.ಪಿ. ಅನುದಾನದಡಿ ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನಿಗಧಿತ ದಿನಾಂಕದೊಳಗೆ ಮಾತ್ರ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಇಲಾಖೆ ಹೆಸರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಹುದ್ದೆಗಳ ಹೆಸರು : ಕೌಶಲ್ಯಾಭಿವೃಧ್ಧಿ
ಒಟ್ಟು ಹುದ್ದೆಗಳು : ತಿಳಿಸಿಲ್ಲ.
ಅರ್ಜಿ ಸಲ್ಲಿಸುವ ಬಗೆ : ಆಫ್ ಲೈನ್
ವಿದ್ಯಾರ್ಹತೆ :
ತರಬೇತಿ ಅವಧಿ 6 ತಿಂಗಳಾಗಿದ್ದು, ಮಾಸಿಕ ಶಿಷ್ಯವೇತನ ಸೌಲಭ್ಯವನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು 18 ರಿಂದ 35 ವರ್ಷದೊಳಗಿರಬೇಕು ಹಾಗೂ 10ನೇ ತರಗತಿ ಉತ್ತೀರ್ಣರಾಗಿರಬೇಕು.
ಅರ್ಜಿಯೊಂದಿಗೆ 10ನೇ ತರಗತಿ ಉತ್ತೀರ್ಣರಾದ ಬಗ್ಗೆ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ವಿಳಾಸದ ಬಗ್ಗೆ ದಾಖಲೆ, ಪಾಸ್ ಪೋರ್ಟ್ ಅಳತೆಯ ಪೋಟೋ, ಆಧಾರ ಕಾರ್ಡ್ ಪ್ರತಿ ಸಲ್ಲಿಸಬೇಕು ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರದ ಜತೆಗೆ, ಉದ್ಯೋಗ ಅವಕಾಶ ಸೌಲಭ್ಯ ನೀಡುವ ಸಾಧ್ಯತೆ ಇರುತ್ತದೆ.
ಈ ಕುರಿತು ಮತ್ತಷ್ಟು ಮಾಹಿತಿಗಾಗಿ ಬೆಂಗಳೂರು ನಾರಾಯಣ ಹೃದಯಾಲಯದ ಶ್ರೀಮತಿ ಕೌಸಲ್ಯಾದೇವಿ ಮೊ: 8582580807 ಹಾಗೂ ವ್ಯವಸ್ಥಾಪಕರಾದ ವಿಕಾಶ್ ಮೊ. 7018879650 ಸಂಖ್ಯೆಗೆ ಸಂಪರ್ಕಿಸಲು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು
ಎಸ್ ಎಸ್ ಎಲ್ ಸಿ ಪಾಸಾದ ಪ್ರಮಾಣ ಪತ್ರ
ಜಾತಿ ಪ್ರಮಾಣಪತ್ರ
ವಿಳಾಸದ ಬಗ್ಗೆ ದಾಖಲೆ
ಪಾಸ್ ಪೋರ್ಟ್ ಅಳತೆಯ ಪೋಟೋ ಆಧಾರ್ ಕಾರ್ಡ್ ಪ್ರತಿ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಕುರಿತು ಸಹ ಮೇಲೆ ತಿಳಇಸಲಾದ ಸಂಪರ್ಕ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಯಬಹುದು.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ಎಸ್ ಎಸ್ ಎಲ್ ಸಿ ಅಂಕಗಳ ಆಧಾರದಲ್ಲಿ ಅಗತ್ಯದಷ್ಟು ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ : ಬೆಂಗಳೂರು ನಾರಾಯಣ ಹೃದಯಾಲಯ, ಬೆಂಗಳೂರು.
Leave a Comment