
ಯಲ್ಲಾಪುರ: ಪಟ್ಟಣದ ವೇದ ವ್ಯಾಸ ಸಭಾಭವನದಲ್ಲಿ ಲಯನ್ಸ ಕ್ಲಬ್ ವತಿಯಿಂದ ಕೃಷ್ಣ ಜನ್ಮಾಷ್ಟಮಿಅಂಗವಾಗಿ ಅಯೋಜಿಸಿದ್ದ ಬಾಲಗೋಪಾಲ,ರಾಧಾ ಕೃಷ್ಣ ವೇಷ ಸ್ಪರ್ಧಾಕಾರ್ಯಕ್ರಮವನ್ನು ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾದಾಸ ಉದ್ಘಾಟಿಸಿ ಮಾತನಾಡಿ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಸಂಸ್ಕಾರ ,ಸಂಸ್ಕೃತಿUಳನ್ನು ಮೈಗೂಡಿಸಿಕೊಳ್ಳಲು ಪ್ರೇರಕವಾಗುತ್ತದೆಯಲ್ಲದೇ ಸಭಾ ಕಂಪನವನ್ನು ಹೋಗಲಾಡಿಸುತ್ತದೆ ಎಂದರು.

ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣಕರ ಮಾತನಾಡಿ ನಮ್ಮ ದೇಶದಲ್ಲಿ ಸಾವಿರಾರು ಹಬ್ಬಗಳನ್ನು ಆಚರಿಸಲಾಗುತ್ತದೆ. ಆದರೆ ಎಲ್ಲ ಹಬ್ಬಗಳಲ್ಲಿ ಆಯಾ ದೇವರಿಗೆ ಸಂಬAಧಿಸಿದ ಆರಾಧನೆ ಮಾತ್ರ ಇದ್ದರೆ ಕೃಷ್ಣಷ್ಟಮಿಯಲ್ಲಿ ಯಾವದೇ ಧರ್ಮ ಭೇದವಿಲ್ಲಧೆ ತಮ್ಮಮಕ್ಕಳಿಗೆ ಕೃಷ್ಣ ರಾಧೆ ವೇಷ ಹಾಕಿ ಸಂಭ್ರಮಿಸುವದನ್ನು ಕಾಣುತ್ತೇವೆ ಎಂದರು.ತಾಲೂಕಾಸ್ಪತ್ರೆಯ ವೈದ್ಯೆ ಡಾ ಸೌಮ್ಯಾ ಕೆ.ವಿ ಮಾತನಾಡಿ ಮಕ್ಕಳನ್ನು ಕಾರ್ಟೂನ ಸಂಸ್ಕೃತಿಯಿAದ ಹೊರತರಲು . ಕೃಷ್ಣನ ವಿಭಿನ್ನ ಅವತಾರ ಸಾಹಸಗಾಥೆಗಳನ್ನು ತಿಳಿಸಿಕೊಡು ಮೂಲಕ ನಮ್ಮಸಂಸ್ಕೃತಿಯ ಕಡೆಗೆ ಆಕರ್ಷಿತರಾಗುವಂತೆ ನಾವೆಲ್ಲರೂ ಪ್ರೇರೆಪಿಸಬೇಕು ಎಂದರು.ನಿವೃತ್ತ ತಹಶೀಲ್ದಾರ ಡಿ.ಜಿ ಹೆಗಡೆ ಶುಭ ಹಾರೈಸಿದರು.ಲಯನ್ಸ್ ಅಧ್ಯಕ್ಷ ಗೋಪಾಲ ನೆತ್ರೆಕರ್ ಅಧ್ಯಕ್ಷತೆವಹಿಸಿದ್ದರು

ಲಯನ್ಸ ಶಾಂತರಾಮ ಹೆಗಡೆ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಪುಟಾಣಿ ಮಹಂತಿ ಹೆಗಡೆ ಪ್ರಾರ್ಥಿಸಿದರು. ವಿದ್ಯಾ ಭಟ್ಟ ನಿರ್ವಹಿಸಿದರು. ಬಾಲಗೋಪಾಲ,ರಾಧಾ ಕೃಷ್ಣ ವೇಷ ಸ್ಪರ್ಧೆಯಲ್ಲಿ ೨೦೦ ಚಿಣ್ಣರು ಭಾಗವಹಿಸಿದ್ದರು.ನಂತರ ನಡೆದ ಸ್ಫರ್ಧೆಯಲ್ಲಿ ಕೃಷ್ಣ ನ, ವಿವಿಧ ಭಂಗಿಯ,ರಾಧೆಯ ವೇಷ ತೊಟ್ಟ ಚಿಣ್ಣರ ಪ್ರದರ್ಶನ ಆಕರ್ಷನೀಯ ವಾಗಿತ್ತು.

ಸ್ಪರ್ಧಾ ವಿಜೇತರು –ಬಾಲ ಗೋಪಾಲ ಸ್ಪರ್ಧೆ ಯಲ್ಲಿ ಅಪೇಕ್ಷಾ ಶ್ರೀಪಾದ್ ಭಟ್ಟ ಪ್ರಥಮ, ಸಿರಿ ನಾರಾಯಣ ಭಟ್ಟ ದ್ವಿತೀಯ, ಆರ್ಯನ್ ಪ್ರವೀಣ ಇನಾಮದಾರ ತ್ರತೀಯ ಸ್ಥಾನ ಪಡೆದರು.ರಾಧಾ ಕೃಷ್ಣ ಸ್ಪರ್ಧೆಯಲ್ಲಿ ಆದ್ಯಾ ಪಟೇಲ ಹಾಗೂ ತೇಜಸ್ವಿನಿ ಭಟ್ಟ ಪ್ರಥಮ, ಆರುಷ ನಾಯ್ಕ, ಹಾಗೂ ಸನ್ನಿದಿ ಗಚ್ಚಿನಮನಿ ಮತ್ತು ಹರ್ಷ ಹಾಗೂ ಲಾಸ್ಯ, ಅಬ್ದುಲ್ ರೆಹಮಾನ್ ಹಾಗೂ ಹನಿ ತ್ರತೀಯ ಸ್ಥಾನ ಪಡೆದರು .ನಿರ್ಣಾಯಕರಾಗಿ ಪ್ರಭಾ ಜಯರಾಜ,ಸುಮಂಗಲಾ ಜೋಶಿ, ಐಶ್ವರ್ಯ ಬದ್ದಿ ಕಾರ್ಯ ನಿರ್ವಹಿಸಿದರು.
ಲಯನ್ಸ್ ಕ್ಲಬ್ ನಿಂದ ಸ್ಪರ್ಧೆ ಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಶಸ್ತಿ ಪತ್ರ ಚಿತ್ರಕಲೆ ಕಿಟ್ ಹಾಗೂ ವಿಜೇತರಾದವರಿಗೆ ನಗದು,ಪ್ರಶಸ್ತಿಪತ್ರವನ್ನು ಲಯನ್ಸ ಎಸ್ ಎಲ್ ಭಟ್ಟ ವಿತರಿಸಿದರು. ಈ ಸಂದರ್ಭದಲ್ಲಿ ಲಯನ್ಸ ಕಾರ್ಯದರ್ಶಿ ಸುರೇಶ ಬೊರಕರ, ಸದಸ್ಯರಾದ ಶ್ರೀಧರ ಶೆಟ್ಟಿ,ಮಂಜುನಾಥ ನಾಯ್ಕ, ಶಿವಲಿಂಗಯ್ಯ ಅಲ್ಲಯ್ಯನವರಮಠ, ಘನಶ್ಯಾಮ ಹೆಗಡೆ , ಮುಂತಾದವರು ಇದ್ದರು.
Leave a Comment