ಭಟ್ಕಳ- ಭಟ್ಕಳದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಜುಲೈ 25 ರಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೆಕರ್ ನೇತೃತ್ವದಲ್ಲಿ ಭಟ್ಕಳ ತಾಲೂಕ ಮಟ್ಟದ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ಗಣಪತಿ ನಾಯ್ಕ ಮುಟ್ಟಳ್ಳಿ ಮಾತನಾಡಿ ಭಟ್ಕಳದಲ್ಲಿ ಅಕ್ರಮ ದಂಧೆಗಳಾದ ಮಟ್ಕಾ , ಗಾಂಜಾ ಮಾರಾಟ , ಇಸ್ಪೀಟ್ ದಂಧೆ, ಅಕ್ರಮ ಕ್ಲಬ್ ಗಳಲ್ಲಿ ಅಂಧರ್ ಬಾಹರ್ ಇಸ್ಪೀಟ್ ದಂಧೆ, ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ.
ಮಾಧ್ಯಮಗಳಲ್ಲಿ ಮಾತ್ರ ಭಟ್ಕಳದಲ್ಲಿ ಅಕ್ರಮ ಚುಟುವಟಿಕೆ ಕಡಿವಾಣ ಹಾಕಲಾಗಿದೆ ಎಂದು ಬರುತ್ತಿದೆ ಆದರೆ ಭಟ್ಕಳದ್ದಲಿ ಅಕ್ರಮ ಚಟುವಟಿಕೆಗಳು ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ , ಇದಕ್ಕೆ ಮೊದಲು ಕಡಿವಾಣ ಹಾಕಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮ್ಮನ್. ಡಿ.ಪನ್ನೆಕರ್ ಅವರಿಗೆ ಗಮನಕ್ಕೆ ತಂದಿದ್ದರು.
ಇವರ ಪ್ರಶ್ನೆಗೆ ಉತ್ತರಿಸಿದ ಎಸ್.ಪಿ ಸುಮನ್ ಪನ್ನೆಕರ ಅವರು 1 ತಿಂಗಳೊಳಗೆ ಭಟ್ಕಳದಲ್ಲಿ ಅಕ್ರಮ ದಂಧೆಗಳನ್ನು ಸಂಪೂರ್ಣ ನಿಯಂತ್ರಿಸುವುದಾಗಿ ತಿಳಿಸಿದ್ದರು. ಇದರ ಫಲವಾಗಿ ಕಳೆದ ಒಂದು ವಾರದಿಂದ ಭಟ್ಕಳದಲ್ಲಿ ಮಟ್ಕಾ ದಂಧೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ, 35 ಮಟ್ಕಾ ಬುಕ್ಕಿಗಳಿಗೆ ಭಟ್ಕಳ ಪೊಲೀಸ್ ಡಿ.ಎಸ್.ಪಿ ಅವರು ಪೊಲೀಸ್ ಠಾಣೆಗೆ ಕರೆಯಿಸಿ ಮಟ್ಕಾ ದಂಧೆ ನಡೆಯಿಸದಂತೆ ಖಡಕ್ ವಾರ್ನಿಂಗ್ ನೀಡಿ , ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಕಳೆದ 2 ದಿನಗಳ ಹಿಂದೆ ಭಟ್ಕಳ ಪೋಲೀಸ್ ರು ಭಟ್ಕಳದ ತಲಾಂದ ನಲ್ಲಿರುವ ಓ.ಸಿ ಬುಕ್ಕಿಯೊಬ್ಬನ ಮನೆಗೆ ದಾಳಿ ನಡೆಸಿದ್ದು ಮನೆಯಲ್ಲಿ ಓ.ಸಿ ದಂಧೆಗೆ ಬಳಸಿರುವ ಹಣ ಸಿಕ್ಕಿದು , ಓ.ಸಿ ಬುಕ್ಕಿಗಳು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಒಟ್ಟಾರೆಯಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಲೇಡಿ ಸಿಂಗಂ ಎಂಬ ಬಿರುದು ಪಡೆದಿರುವ ಸುಮನ್ ಡಿ ಪನ್ನೆಕರ್ ಅವರು ಭಟ್ಕಳ್ ದ ಜನತೆಗೆ ತಾವು ಕೊಟ್ಟ ಭರವಸೆಯಂತೆ ಭಟ್ಕಳದಲ್ಲಿ ಮಟ್ಕಾ ದಂಧೆಯನ್ನು ನಿಯಂತ್ರಿಸುವಲ್ಲಿ ಕ್ರಮ ಕೈಗೊಳ್ಳುವಲ್ಲಿ ಸಫಲರಾಗಿದ್ದಾರೆ.
ಇವರು ಮಟ್ಕಾ ದಂಧೆ ವಿರುದ್ಧ ಭಟ್ಕಳದಲ್ಲಿ ಕಠಿಣ ಕ್ರಮ ಕೈಗೊಂಡ ಫಲವಾಗಿ 7 ಮಂದಿ ಮಟ್ಕಾ ಬುಕ್ಕಿಗಳು ಭಟ್ಕಳದಿಂದ ಸದ್ಯ ಊರು ಬಿಟ್ಟು ಬೇರೆ ಕಡೆ ಪರಾರಿಯಾಗಿದ್ದಾರೆ ಎಂಬ ಸುದ್ದಿ ಊರೆಲ್ಲಾ ಹರಡಿದೆ. ಕೆಲವು ತಿಂಗಳುಗಳ ಹಿಂದೆ ಸರಕಾರಿ ಕಟ್ಟಡವನ್ನು ಬಾಡಿಗೆಗೆ ಪಡೆದು ಸರ್ಕಾರಿ ಕಟ್ಟಡವನ್ನು ಮಟ್ಕಾ ಕಚೇರಿ ಮಾಡಿಕೊಂಡು ತಮ್ಮ ಮಟ್ಕಾ ದಂಧೆ ನಡೆಸುತ್ತಿದ್ದ ಮಟ್ಕಾ ಬುಕ್ಕಿಗಳು ಈಗ ತಮ್ಮ ಬಾಯಿ ಮುಚ್ಚಿಕೊಂಡು , ತಲೆ ಮರೆಯಿಸಿಕೊಂಡು ತಿರುಗಾಡುತ್ತಿದ್ದಾರೆ.ಭಟ್ಕಳದಲ್ಲಿ ಈ ಮಟ್ಟಿಗೆ ಮಟ್ಕಾ ದಂಧೆಯನ್ನು ನಿಯಂತ್ರಣಕ್ಕೆ ತಂದಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೇಡಿ ಸಿಂಗಂ ಸುಮನ್ ಪನ್ನೆಕರ ಅವರನ್ನು ಭಟ್ಕಳದ ಪ್ರಜ್ಞಾವಂತ ನಾಗರಿಕರು ಪ್ರಶಂಸಿಸಿದ್ದಾರೆ.
Leave a Comment