ಯಲ್ಲಾಪುರ : ತಾಲೂಕಿನ ಪಣಸಗುಳಿ ಸೇತುವೆ ದಾಟುವ ವೇಳೆ ಲಾರಿಯೊಂದು ನದಿ ನೀರಿಗೆ ಕೊಚ್ಚಿ ಹೋಗಿ ಭಾರಿ ಅವಘಡ ನಡೆದಿದೆ. ಘಟನೆಯಲ್ಲಿ ಐವರು ರಕ್ಷಣೆಯಾಗಿದ್ದರೆ. ಇನ್ನೋರ್ವ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.
ತಾಲೂಕಿನ ಅರಬೈಲ್ ಸಮೀಪ ಹರಿಯುವ ಗಂಗಾವಳಿ ನದಿಗೆ ಅಡ್ಡಲಾಗಿ ಪಣಸಗುಳಿ ಸೇತುವೆ ನಿರ್ಮಿಸಲಾಗಿದೆ. ಮಳೆಯಿಂದಾಗಿ ಗಂಗಾವಳಿ ನದಿಯಲ್ಲಿ ನೀರು ಹೆಚ್ಚಿದ್ದ ಕಾರಣ ಸೇತುವೆಯ ಮೇಲೆ ನೀರು ಹರಿಯುತ್ತಿತ್ತು. ಈ ವೇಳೆ ಚಿರೇಕಲ್ಲು ಅನ್ ಲೋಡ್ ಮಾಡಿ ವಾಪಸ್ಸಾಗುತ್ತಿದ್ದ ಲಾರಿ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಲಾರಿ ನೀರಿನಲ್ಲಿ ಕೊಚ್ಚಿ ಹೋಗುವ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮುಳಗಿನ ಲಾರಿ ಮೇಲೆ ನಿಂತು ಲಾರಿಯಲ್ಲಿದ್ದ ಕಾರ್ಮಿಕರು ರಕ್ಷಣೆಗಾಗಿ ಕೂಗಿಕೊಂಡಿದ್ದು, ಅಷ್ಟರಲ್ಲೇ ಲಾರಿ ಮಗುಚಿ ನದಿಗೆ ಬಿದ್ದು ಕೊಚ್ಚಿ ಹೋಗಿದೆ. ತಕ್ಷಣ ಗುಳ್ಳಾಪುರ ಭಾಗದಲ್ಲಿ ಓಡಾಡುತ್ತಿದ್ದ ಬೋಟ್ ಮೂಲಕ ಲಾರಿ ಚಾಲಕ ರಾಜೇಶ್ ಹರಿಕಂತ್ರ, ಕಾರ್ಮಿಕರಾದ ಸುನೀಲ್, ರಾಜು, ಶಿವಾನಂದ, ದಿನೇಶ ಎಂಬುವವರನ್ನ ರಕ್ಷಣೆ ಮಾಡಲಾಗಿದೆ.
ಇನ್ನೋರ್ವ ಸಂದೀಪ್ ಈವರೆಗೂ ನಾಪತ್ತೆಯಾಗಿದ್ದು, ನೀರಿನಲ್ಲಿ ಕೊಚ್ಚಿ ಹೋಗಿರುವ ಲಾರಿಯಲ್ಲೇ ಇರುವ ಶಂಕೆ ವ್ಯಕ್ತವಾಗಿದೆ. ರಾತ್ರಿಯವರೆಗೂ ಸ್ಥಳೀಯರೊಂAದಿಗೆ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.
Leave a Comment