ಬೆಂಗಳೂರು: ಕೇಂದ್ರ ಸರಕಾರದ ಸಿಬ್ಬಂದಿ ನೇಮ ಕಾತಿ ಆಯೋಗವು ಸ್ಟೆನೋಗ್ರಾಫರ್ ಗ್ರೇಡ್ ಸಿ ಮತ್ತು ಡಿ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಅಭ್ಯರ್ಥಿ ಗಳು ಅರ್ಜಿ ಸಲ್ಲಿಸಲು ಸೆ.5 ಕಡೆಯ ದಿನ, ಅಭ್ಯರ್ಥಿ ಗಳು 1/1/2022 ರಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ 18ರಿಂದ 30 ವರ್ಷ ದೊಳಗಿರಬೇಕು.
ಒಬಿಸಿ, ಎಸ್‌ಸಿ/ಎಸ್‌ಟಿ/ಇಎಸ್ ಎಂ ಇತರ ನಿರ್ಧಿಷ್ಟ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ 12ನೇ ತರಗತಿ ಅಥವಾ ತತ್ಸಮಾನ ಮತ್ತು ಅನುಭವವನ್ನು ಹೊಂದಿರಬೇಕು.
ಈ ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿದ್ದು, ನವೆಂಬರ್‌ನಲ್ಲಿ ನಡೆಯಲಿದೆ. ಅರ್ಜಿಗಳನ್ನು ವೆಬ್‌ಸೈಟ್
https:// ssc.nic.in ಮೂಲಕ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೆಹಲಿಯ ಎಸ್ ಎಸ್ ಸಿ ಮುಖ್ಯ ಕಚೇರಿ ವೆಬ್‌ಸೈಟ್ https://ssc.nic. in ಮತ್ತು ಕರ್ನಾಟಕ ಕೇರಳ ಪ್ರದೇಶದ ವೆಬ್‌ಸೈಟ್ https://ssckkr.nic.in ಹಾಗೂ ದೂ: 080 25502520, 9483862020 ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Leave a Comment