ಹೊನ್ನಾವರ: ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ 7 ಆಕಳು, 3 ಕರುವನ್ನು ರಕ್ಷಿಸಿರುವ ಇಲ್ಲಿನ ಪೊಲೀಸರು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಅನಂತವಾಡಿ ಚೆಕ್ಪೋಸ್ಟ್ನಲ್ಲಿ ಗುಜರಾತಿನಿಂದ ಕೇರಳಕ್ಕೆ ಲಾರಿಯ ಹಿಂದೆ ತಾಡಪಲ್ ಬಿಟ್ಟು ಮರೆಮಾಚಿ ಅಕ್ರಮವಾಗಿ ಜಾನುವಾರಿ ಸಾಗಾಣಿಕೆ ಮಾಡುತ್ತಿದ್ದರು. ಅನಂತವಾಡಿ ಚೆಕ್ ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಮಂಕಿ ಠಾಣೆಯ ಪೊಲೀಸರು ಪರಿಶೀಲನೆಯ ವೇಳೆಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಮಂಕಿ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment