ಬೆಂಗಳೂರು: ಮತದಾರರ ಗುರುತಿನ ಚೀಟಿಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆ ಲಿಂಕ್ ಮಾಡಬೇಕೆಂದು ಪಾಲಿಕೆ ಸುತ್ತೋಲೆ ಹೊರಡಿಸಿದೆ. ಭಾರತ ಚುನಾವಣಾ ಆಯೋಗ ಆದೇಶದನ್ವಯ ಎಲ್ಲ ಮತದಾರರು ಆಧಾರ್ ಲಿಂಕ್ ಮಾಡಬೇಕು. ಮನೆಯಲ್ಲೇ ಕುಳಿತು ಲಿಂಕ್ ಮಾಡಿಕೊಳ್ಳುವ ಅವಕಾಶವಿದೆ. ಇದಕ್ಕಾಗಿ ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.
ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ವೋಟ ಹೆಲ್ಸ್‌ಲೈನ್ ಆ್ಯಪ್’ ಎಂದು ನಮೂದಿಸಿ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಆ್ಯಪ್ ಕೆಳಗಡೆ ಎಡಬದಿಯಲ್ಲಿ ಎಕ್ಸ್‌ಪ್ಲೋರ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತರ, ಎಲೆಕ್ಟೋರಲ್ ಅಥೆಂಟಿಕೇಶನ್ ಫಾರ್ಮ್-6ಬಿ ಸಿಲೆಕ್ಟ್ ಮಾಡಬೇಕು.
ಮೊಬೈಲ್ ನಮೂದಿಸಿದರೆ ಒಟಿಪಿ ಬರಲಿದೆ. ಒಟಿಪಿ ನಮೂದಿಸಿದ ಬಳಿಕ ವೆರಿಫೈ ಎಂದು ಮಾಡಬೇಕು. ಚುನಾವಣಾ ಗುರುತಿನಚೀಟಿ ಹಾಕಿದ ನಂತರ ರಾಜ್ಯವನ್ನು ಆಯ್ಕೆ ಮಾಡಿ ಆಧಾರ್, ಮೊಬೈಲ್ ಸಂಖ್ಯೆ, ಗ್ರಾಮದ ಹೆಸರು ಹಾಕಿದ ಬಳಿಕ ದೃಢೀಕರಿಸಿದ ಎಂಬ ಬಟನ್ ಕ್ಲಿಕ್ ಮಾಡಿದರೆ ಸಕ್ಸಸ್ ಫುಲ್ ಎಂದು ನಂಬರ್ ಬರಲಿದೆ.
Leave a Comment