ಸೋನಾಲಿಗೆ ಡ್ರಗ್ಸ್ ನೀಡಿ ಹತ್ಯೆ ಮಾಡಿರುವ ಶಂಕೆ
ಪಣಜಿ: ಹರ್ಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರನ್ನು ಅವರ ಸಹಾಯಕರೇ ಪಾರ್ಟಿಯಲ್ಲಿ ಡ್ರಗ್ಸ್ ನೀಡಿರುವ ವಿಷಯ ದೃಢಪಟ್ಟಿದ್ದು, ಮೇಲ್ನೋಟಕ್ಕೆ ಹಣಕಾಸಿನ ಕಾರಣಕ್ಕಾಗಿ ಈ ಹತ್ಯೆ ನಡೆಸಿರುವ ಸಾಧ್ಯತೆ ಕಂಡುಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಪೊಲೀಸರ ವಶದಲ್ಲಿರುವ ಸುಧೀರ್, ಸುಖ್ವಿಂದರ್ ಗೋವಾದ ರೆಸ್ಟೋರೆಂಟ್ನಲ್ಲಿ ನಡೆದ ಪಾರ್ಟಿಯಲ್ಲಿ ಪಾನೀಯದಲ್ಲಿ ರಾಸಾಯನಿಕವನ್ನು ಬೆರೆಸಿ ಅದನ್ನು ಸೋನಾಲಿಗೆ ಕುಡಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.
ಬಳಿಕ ಸೋನಾಲಿ ಜೊತೆ ಇಬ್ಬರೂ ಬಾತ್ರೂಮ್ನಲ್ಲೇ 2 ಗಂಟೆ ಕಾಲ ಇದ್ದ ವಿಷಯವೂ ಬೆಳಕಿಗೆ ಬಂದಿದೆ.
ಈ ನಡುವೆ ಸೋನಾಲಿ ಅವರ ಅಂತ್ಯ ಸಂಸ್ಕಾರವನ್ನು ಶುಕ್ರವಾರ ಹರ್ಯಾಣದ ಹಿಸ್ಸಾರ್ನಲ್ಲಿ ನಡೆಸಲಾಯಿತು.
Leave a Comment