ನ್ಯೂಯಾರ್ಕ್: ಜಗತ್ತಿನಾದ್ಯಂತ ಸುಮಾರು 3.3 ಕೋಟಿ ಜನರು ಬಳಸುವ ‘ಲಾಸ್ಟ್ ಪಾಸ್’, ಎಂಬ ಪಾಸ್‌ವರ್ಡ್ ಮ್ಯಾನೇಜರ್ ವೆಬ್‌ಸೈಟಿನ ಸೋರ್ಸ್‌ಡ್ ಹಾಗೂ ಕಂಪನಿ ಸ್ವಾಮ್ಯದ ಮಾಹಿತಿಯನ್ನು ಹ್ಯಾಕ್ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.
ಲಾಸ್ಟ್‌ಪಾಸ್ ಪಾಸ್‌ವಡ್‌೯ಗಳನ್ನು ಉಳಿಸಿಕೊಳ್ಳುವ ವೆಬ್‌ಸೈಟ್ ಆಗಿದೆ. ನೆಟ್ ಫಿಕ್ಸ್ ಗೂಗಲ್, ಟ್ವಿಟರ್, ಇನ್‌ಸ್ಟಾಗ್ರಾಂ ಮೊದಲಾದ ಹಲವಾರು ಅಕೌಂಟ್‌ಗಳನ್ನು ಬಳಕೆದಾರರು ಹೊಂದಿರುತ್ತಾರೆ.
ಪ್ರತಿಬಾರಿ ಪಾಸ್‌ವಡ್‌೯ಗಳನ್ನು ನೆನೆಪಿಸಿ ಟೈಪ್ ಮಾಡುವ ಬದಲು ಮೊದಲೇ ಕಂಪನಿ ತನ್ನ ಸಿಸ್ಟಮ್‌ಗಳಲ್ಲಿ ಪಾಸ್‌ವರ್ಡ್ ಅನ್ನು ಉಳಿಸಿಕೊಳ್ಳುತ್ತದೆ.
ಬಳಕೆದಾರರಿಗೆ ಆಟೋ ಜನರೆಟೆಡ್ ಪಾಸ್‌ವರ್ಡ್‌ಗಳನ್ನು ಒದಗಿಸುತ್ತದೆ. ಹೀಗಾಗಿ ಕಂಪನಿಯ ಮಾಹಿತಿ ಹ್ಯಾಕ್ ಆದ ಬಳಿಕ ಹ್ಯಾಕರ್ ಹಲವರ ವೈಯಕ್ತಿಕ ಖಾತೆ ಹಾಗೂ ಮಾಹಿತಿಗೂ ಕನ್ನ ಹಾಕುವ ಭೀತಿ ವ್ಯಕ್ತವಾಗಿದೆ.
Leave a Comment