ಹೊನ್ನಾವರ : ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 12 ವರ್ಷಗಳ ಹಿಂದಿನ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.
ನೇಪಾಳ ಶೇಟಿ ರಾಜ್ಯದ ಭಂಡಾರಿ ಟೋಲ್ ನ ನಿವಾಸಿ, ಜನಕ ಬಹಾದ್ದೂರ್ ಜಯಬಹಾದ್ದೂರ್ ಭಂಡಾರಿ ಬಂಧಿತ ಆರೋಪಿ. 2010 ರ ಮಾ. 2 ರಂದು ಮಧ್ಯಾಹ್ನ 3.30 ರಿಂದ ಮಾ. 3 ರ ಬೆಳ್ಳಿಗೆ 8 ಗಂಟೆಯ ನಡುವಿನ ಅವಧಿಯಲ್ಲಿ ಹೊನ್ನಾವರದ ಕೋರ್ಟ್ ರಸ್ತೆಯಲ್ಲಿರುವ ಮುನ್ಸಿಪಾಲಿಟಿ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಕುಮಾರ ರೋಡ್ ಲೈನ್ಸ್ ಕಚೇರಿಯ ಶೆಟರ್ಸ್ನ ಬೀಗ ಮುರಿದು ಒಳಹೊಕ್ಕಿ ಒಳಗಿದ್ದ ಲೊನೋವಾ ಕಂಪನಿಯ ಲ್ಯಾಪ್ ಟಾಪ್ ನ್ನು ಕಳವು ಮಾಡಲಾಗಿತ್ತು.
ಶ್ರೀಕುಮಾರ ರೋಡ್ ಲೈನ್ಸ್ ಕಚೇರಿಯ ಅಕ್ಕ ಪಕ್ಕದ ವಿ.ಎಮ್ ಭಂಡಾರಿ ವಕೀಲರ ಕಚೇರಿ ಮತ್ತು ಡಾ.ಮನೋಜ ನಾಯ್ಕ ಇವರ ಕ್ಲಿನಿಕ್ ನ ಶೆಟರ್ಸ್ ಬಾಗಿಲಿನ ಬೀಗಗಳನ್ನು ಮುರಿದು ಒಳ ಹೊಕ್ಕಿ ಕಳವು ಮಾಡಲು ಪ್ರಯತ್ನಿಸಿದ್ದರು ಎಂದು ಹೊನ್ನಾವರದ ನಿವಾಸಿ ಸದಾನಂದ ಮಾಬ್ಲೇಶ್ವರ ನಾಯ್ಕ ಮಾ. 3,2010 ರಂದು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ದೂರಿನ ಮೇರೆಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ತಾಂತ್ರಿಕ ಸಾಕ್ಷಾö್ಯಧಾರಗಳ ಮೇಲೆ ಆರೋಪಿ ನೇಪಾಳ ಶೇಟಿ ರಾಜ್ಯದ ಭಂಡಾರಿ ಟೋಲ್ ನ ನಿವಾಸಿ, ಜನಕ ಬಹಾದ್ದೂರ್ ಜಯಬಹಾದ್ದೂರ್ ಭಂಡಾರಿ ಈತನನ್ನು ಪತ್ತೆ ಮಾಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Leave a Comment