ಹುಬ್ಬಳ್ಳಿ : ಕ್ರೆಡಿಟ್ ಕಾರ್ಡ್ ಅಪಡೇಟ್ ಮಾಡುವ ಜತೆಗೆ ಕ್ರೆಡಿಟ್ ಮಿತಿ ಹೆಚ್ಚಿಸುವುದಾಗಿ ನಂಬಿಸಿ ಲಿಂಕ್ ಕಳುಹಿಸಿ ಹಂತ-ಹಂತವಾಗಿ 79 ಸಾವಿರ ವರ್ಗಾಯಿಸಿಕೊಂಡಿರುವ ಘಟನೆ ನಡೆದಿದೆ.
ಕೇಶ್ವಾಪುರದ ವಿಜಯಕುಮಾರ ಬೌಚ ವಂಚನೆಗೊಳಗಾದವರು. ನಿಮ್ಮ ಕಾರ್ಡ್ ಅಪಡೇಟ್ ಮಾಡಬೇಕು. ಇಲ್ಲದಿದ್ದರೆ, ಬ್ಲಾಕ್ ಆಗಲಿದೆ ಎಂದಿದ್ದಾರೆ. ಅಲ್ಲದೇ, ಕ್ರೆಡಿಟ್ ಲಿಮಿಟ್ ಹೆಚ್ಚಿಗೆ ಮಾಡುತ್ತೇವೆ ಎಂದು ನಂಬಿಸಿದ್ದಾರೆ.
ಬಳಿಕ ವಾಟ್ಸ್‌ಆ್ಯಪ್ ನಂಬರ್‌ಗೆ ಲಿಂಕ್ ಕಳುಹಿಸಿ ಅದರನ್ನು ಇನ್‌ಸ್ಟಾಲ್ ಮಾಡಿಕೊಳ್ಳಲು ತಿಳಿಸಿದ್ದಾರೆ. ಆನಂತರ ಕ್ರೆಡಿಟ್ ಕಾರ್ಡ್, ಸಿವಿವಿ ನಂಬರ್ ಹಾಕುವ ಜತೆಗೆ ಅಗತ್ಯ ಮಾಹಿತಿ ಪಡೆದುಕೊಂಡು ಹಂತ-ಹಂತವಾಗಿ ಒಟ್ಟು 79,434 ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಲಾಗಿದೆ.
ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 1 ಲಕ್ಷ ವಂಚನೆ: ಮತ್ತೊಂದು ಪ್ರಕರಣದಲ್ಲಿ ಕ್ರೆಡಿಟ್ ಕಾರ್ಡ್ ಕ್ಯಾನ್ಸಲ್ ಆಗಲಿದೆ ಎಂದು ನಂಬಿಸಿದ ವಂಚಕರು, ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆದು ಕೆ 1 ಲಕ್ಷ ವರ್ಗಾಯಿಸಿಕೊಂಡಿರುವ ಘಟನೆ ನಡೆದಿದೆ. ಧಾರವಾಡದ ನಾಸಿರ್ ಖಾನ್ ವಂಚನೆಗೊಳಗಾದವರು.
ಮೋಸ ಮಾಡುವ ಉದ್ದೇಶದಿಂದ ಕರೆ ಮಾಡಿದ ಅಪರಿಚಿತರು, ಕ್ರೆಡಿಟ್ ಕಾರ್ಡ್ ಕ್ಯಾನ್ಸಲ್ ಮಾಡುವುದಾಗಿ ಹೇಳಿದ್ದಾರೆ. ಬಳಿಕ ಕ್ರೆಡಿಟ್ ಕಾರ್ಡ್ ನಂಬರ್, ಸಿವಿವಿ ನಂಬರ್, ಎಕ್ ಪೈರಿ ಡೇಟ್, ಒಟಿಪಿ ನಂಬರ ಪಡೆದು ಒಟ್ಟು 1 ಲಕ್ಷ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment