ಕಾರವಾರ: ಸಾರಾಯಿ ಕುಡಿಯುವ ವಿಷಯದಲ್ಲಿ ಮನೆಯವರೊಂದಿಗೆ ಜಗಳವಾಡಿದ್ದ ಎನ್ನಲಾದ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರವಾರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಸುಂಕೇರಿ ಕಠಿಣಕೋಣದ ಗಣೇಶ ಮೇಸ್ತಾ(45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಈತನು ಸಾರಾಯಿ ಕುಡಿಯುವ ವಿಷಯಕ್ಕೆ ಸಂಬಂಧಿಸಿದಂತೆ ಮನೆಯವರೊಂದಿಗೆ ಜಗಳ ಮಾಡಿಕೊಂಡು ಬಳಿಕ ನಾನು ಮನೆಯಲ್ಲಿ ಇರುವುದಿಲ್ಲ ಎಂದು ಹೇಳಿ ತನ್ನ ಸ್ಕೂಟರ್ ನೊಂದಿಗೆ ಹೊರ ಹೋದವ ವಾಪಸ್ ಬರಲಿಲ್ಲ ಎನ್ನಲಾಗಿದೆ.
ಹುಡುಕಾಟ ಆರಂಭಿಸಿ ಶಿರವಾಡ ಗ್ರಾ.ಪಂ. ವ್ಯಾಪ್ತಿಯ ಜಾಂಬಾ ಅರಣ್ಯದ ನಾರಗೇರಿ ಬಳಿ ರಸ್ತೆಯ ಪಕ್ಕ ಈತನ ಸ್ಕೂಟರ್ ಕಂಡುಬಂತು. ಅಲ್ಲಿಯೇ ಮರವೊಂದರ ಟೊಂಗೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಈತನ ಮೃತದೇಹ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಮೃತನ ಸಹೋದರ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.
Leave a Comment