ಕಾನಕೋಣ (ಗೋವಾ) : ಇಲ್ಲಿನ ರಾಷ್ಟಿçÃಯ ಹೆದ್ದಾರಿ 66ಎನ ಮನೋಹರ್ ರ‍್ರೀಕರ್ ಬೈಪಾಸ್ ನಲ್ಲಿ ಕಾರೊಂದು ಮತ್ತೋಂದು ಕಾರು ಹಾಗೂ ಸ್ಕೂಟರ್ ಗೆ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವದಾರುಣ ಘಟನೆ ನಡೆದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಮಡಗಾಂವ್ ನಿಂದ ಕಾರವಾರಕ್ಕೆ ತೆರಳುವ ವೇಳೆ ಅತಿವೇಗದಲ್ಲಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಕಾರು ಬಲಬದಿಗೆ ಹಾರಿ, ಎದುರಿನಿಂದ ಕಾರವಾರದ ಸಾತೇರಿ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದ ಕುಟುಂಬವಿದ್ದ ಕಾರಿಗೆ ಡಿಕ್ಕಿಯಾಗಿ, ಮತ್ತೊಂದು ಸ್ಕೂಟರ್ ಗೂ ಬಡಿದಿದೆ.
ಘಟನೆಯಲ್ಲಿ ಸ್ಥಳದಲ್ಲೇ ಮಗು ಸೇರಿ ಮೂವರು ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿರುವ 6 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Leave a Comment