ವಿಜಯಪುರ ಜಿಲ್ಲೆಯ ಸಿದ್ದರಾಮಪ್ಪ ಪೊಲೀಸ್ ಬಲೆಗೆ ಕೆಲಸಕ್ಕೆ ಅಕ್ರಮ ದಾಖಲೆ ! ಬಂಧಿತರ ಸಂಖ್ಯೆ 12 ಕ್ಕೆ
ಬೆಂಗಳೂರು : ಕಳೆದ 2014-15 ನೇ ಸಾಲಿನ ಶಿಕ್ಷಕರ ನೇಮಕಾತಿ ಹಗರಣ ಸಂಬAಧ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಕಾರ್ಯಾಚರಣೆ ಮುಂದುವರೆದಿದ್ದು, ಬುಧವಾರ ಮತ್ತೊಬ್ಬ ಶಿಕ್ಷಕ ಸಿಐಡಿ ಬಲೆಗೆ ಬಿದ್ದಿದ್ದಾನೆ. ಇವರೊಂದಿಗೆ ಬಂಧಿತ ಶಿಕ್ಷಕರ ಸಂಖ್ಯೆ 12 ಕ್ಕೇರಿದಂತಾಗಿದೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತದ್ದೇವಾಡಿ ಗ್ರಾಮದ ಸಿದ್ದರಾಮಪ್ಪ ಆರ್. ಬಿರಾದಾರ್ ಬಂಧಿತರಾಗಿದ್ದು, ಅಕ್ರಮ ದಾಖಲೆ ಸಲ್ಲಿಸಿ ಶಿಕ್ಷಕ ಹುದ್ದೆ ಪಡೆದ ಆರೋಪ ಸಿದ್ದರಾಮಪ್ಪ ವಿರುದ್ಧ ಕೇಳಿ ಬಂದಿದೆ.
ಈ ಕೃತ್ಯ ಬೆಳಕಿಗೆ ಬಂದ ನಂತರ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಕೊನೆಗೆ ಸಿಐಡಿ ಪತ್ತೆ ಹಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಕಪನಿಂಬರಗಿ ಪ್ರೌಢ ಶಾಲೆಯಲ್ಲಿ ಸಿದ್ಧರಾಮಪ್ಪ ವಿಜ್ಞಾನ ಶಿಕ್ಷಕನಾಗಿ ಕಾರ‍್ಯನಿರ್ವಹಿಸುತ್ತಿದ್ದರು. 2014 – 15 ನೇ ಸಾಲಿನಲ್ಲಿ ಆತ ಕೂಡ ಅಕ್ರಮ ವಾಗಿ ಹುದ್ದೆ ಪಡೆದಿದ್ದರು. ಇದೇ ಪ್ರಕರಣ ದಲ್ಲಿ ತುಮಕೂರ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸಿಐಡಿ ಕಾರ್ಯಚರಣೆ ನಡೆಸಿ 11 ಶಿಕ್ಷಕರನ್ನು ಬಂಧಿಸಿತ್ತು.
ಶಿಕ್ಷಕರ ಬಂಧನ ಬೆನ್ನಲ್ಲೇ ಈಗ ಅಧಿಕಾರಿಗಳಿಗೆ ನಡುಕು ಶುರುವಾಗಿದ್ದು, ಕೆಲವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ನೀಡಿದೆ ಎಂದು ತಿಳಿದು ಬಂದಿದೆ.
Leave a Comment