ಶಿರಸಿ : ಮಾರಿಕಾಂಬಾನಗರ ನಿವಾಸಿ ಮಂಜುನಾಥ ಗಣಪತಿ ಹೆಗಡೆ ಕಡ್ಲೆ ( 74 ) ಸೆ . 2 ರಂದು ನಿಧನರಾದರು . ಮೂಲತಃ ಹೊನ್ನಾವರ ತಾಲೂಕಿನ ಕಡ್ಲೆಯವರಾದ ಇವರು ವಿದ್ಯಾಭ್ಯಾಸದ ನಂತರ ಭಾರತೀಯ ವಾಯು ಸೇನೆಗೆ ಸೇರಿದರು .
1971 ರಲ್ಲಿ ನಡೆದ ಇಂಡೋಪಾಕ್ ಯುದ್ಧದಲ್ಲಿ ಹೋರಾಡಿ ಶೌರ್ಯ ಪ್ರಶಸ್ತಿಗೆ ಭಾಜನಾರಗಿದ್ದರು . ಹತ್ತು ವರ್ಷ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿ ನಂತರ ಮೂರೂರ ಪ್ರಗತಿ ಹಾಯಸ್ಕೂಲಲ್ಲಿ ಶಿಕ್ಷಕರು , ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು . ಅವರು ಪತ್ನಿ , ಮೂವರು ಪುತ್ರರು , ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು – ಬಳಗದವರನ್ನು ಅಗಲಿದ್ದಾರೆ .
Leave a Comment