ಸಿದ್ಧಾಪುರ : ಹೆಂಡತಿ ಮೈಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ ಪತಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಕಾನಗೋಡ ಗ್ರಾಮದ ಗಣೇಶನಗರದಲ್ಲಿ ನಡೆದಿದೆ.
ಕಾನಗೋಡ ಗ್ರಾಮದ ಗಣೇಶನಗರದ ಗುತ್ಯಾ ಸಣ್ಣಹುಡುಗ ಚೆನ್ನಯ್ಯ (56) ತನ್ನ ಪತ್ನಿಗೆ ಬೆಂಕಿ ಹಚ್ಚಿ ತಾನು ಆತ್ಮಹತ್ಯೆಗೆ ಯತ್ನಿಸಿದ ಆರೋಪಿ, ಈತ ಪ್ರತಿ ದಿನ ಸಾರಾಯಿ ಕುಡಿದು ತನ್ನ ಹೆಂಡತಿ ಶ್ರೀಮತಿ ರೇಣುಕಾ ಜೊತೆ ಜಗಳ ಮಾಡುತ್ತಿದ್ದು ಶುಕ್ರವಾರ ಸಂಜೆ 4.30ರ ವೆಳಗೆ ತನ್ನ ಹೆಂಡತಿ ಮೈಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದು ಆಕೆಯ ದೇಹ ಬೆಂಕಿಯಿAದ ಸುಟ್ಟಿದೆ. ಆಕೆಯನ್ನು ಸಿದ್ದಾಪುರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಳೆ ನಾಶಕ ಸೇವಿಸಿದ ಗುತ್ಯಾ ಚೆನ್ನಯ್ಯನನ್ನು ತಾಲೂಕು ಆಸ್ಪತ್ರೆ ಸಿದ್ದಾಪುರದಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment