ಭಟ್ಕಳ: ತಾಲೂಕಿನ ಜಾಲಿರೋಡ್ ಅರ್ಶದ್
ಕ್ಯಾಶ್ಯೂ ಇಂಡಸ್ಟ್ರೀಯಲ್ಲಿ ಉದ್ಯೋಗಿಯಾಗಿದ್ದ ವ್ಯಕ್ತಿಯೋರ್ವನಿಗೆ ಪಿಎಫ್ (ಎಂಫ್ಲಾ ಯೀಸ್ ಪ್ರಾವಿ ಡೆಂಟ್ ಫಂಡ್) ಹಣವನ್ನು ದೊರ ಕಿಸಿ ಕೊಡಲು ನಕಲಿ ದಾಖಲೆ ಪತ್ರವನ್ನು ಸೃಷ್ಟಿಸಿದ್ದ ಆರೋಪದ ಮೇರೆಗೆ ಭಟ್ಕಳ ಶಹರ ಠಾಣಾ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಮುಂಡಳ್ಳಿಯ ರಾಜೇಶ ದೇವಡಿಗ (30) ಎಂದು ಗುರುತಿಸಲಾಗಿದ್ದು, ಈತನಿಂದ ವಿವಿಧ ಪ್ರೌಢಶಾಲೆ, ಕಂಪನಿಗಳ ಸೀಲ್‌ಗಳನ್ನು ಜಪ್ತುಪಡಿಸಿಕೊಳ್ಳಲಾಗಿದೆ. ಅರೋಪಿಯು ಸಾಗರದ ವ್ಯಕ್ತಿಯೋರ್ವರಿಂದ ಸೀಲ್‌ಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಲಭಿಸಿದೆ.
ಹುಬ್ಬಳ್ಳಿಯ ಪಿಎಫ್ ಕಚೇರಿಗೆ ಸಲ್ಲಿಕೆಯಾಗಿದ್ದ ದಾಖಲೆಗಳಲ್ಲಿನ ಸಹಿ ಹೊಂದಾಣಿಕೆಯಾಗದೇ, ಕಂಪನಿಯ ಮಾಲಕರಿಗೆ ಕಳುಹಿಸಿದ್ದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.ಈ ಸಂಬಂಧ ಅರ್ಶದ್ ಕ್ಯಾಶ್ಯ ಇಂಡಸ್ಟ್ರೀ ಮಾಲಕ ರುಕ್ಕುದ್ದೀನ್ ಮಹ್ಮದ್ ಇಬ್ರಾಹಿಂ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪೂರ, ಚಿಕ್ಕಮಂಗಳೂರು ಮುಂತಾದ ಕಡೆಯ ಸ್ಕೂಲ ಮತ್ತು ಇಂಡಸ್ಟ್ರಿಗೆ ಸಂಬಂದ ಪಟ್ಟ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿದ್ದು ಆರೋಪಿ ರಾಜೇಶನ ಹಣಕಾಸು ವ್ಯವಹಾರದ ಬಗ್ಗೆ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಈ ಕುರಿತು ಉತ್ತರ ಕನ್ನಡ ಜಿಲ್ಲೆಯ ಪೊಲೀಸ ಅಧೀಕ್ಷಕರಾದ ಡಾ.ಸುಮನ್ ಪೆನ್ನೆಕರ್ ಹಾಗೂ
ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಎಸ್ ಬದ್ರೀನಾಥ್ ರವರ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ಮುಂದಾಳತ್ವದಲ್ಲಿ ಪ್ರಕರಣದ ಪತ್ತೆಯ ಕುರಿತಂತೆ
ಸಿ.ಪಿ.ಐ ದಿವಾಕರ ಪಿ.ಎಮ್ ,ಪಿ.ಎಸ.ಐ ಸುಮ ಬಿ, ಯಲ್ಲಪ್ಪ ಹೆಚ ಮಾದರ, ಹೆಚ ಬಿ ಕುಡಗುಂಟಿ ಹಾಗೂ ಸಿಬ್ಬಂದಿಗಳಾದ, ಮದರಸಾಬ ಚಿಕ್ಕೇರಿ, ದಿನೇಶ ನಾಯಕ, ಸಿದ್ದಪ್ಪ ಕಾಂಬಳೆ, ಲೋಕಪ್ಪ ಕತ್ತಿ,
ಮುಂತಾದವರು ಉಪಸ್ಥಿತಿ ಇದ್ದರು.
Leave a Comment